"ಅಸಮರ್ಥ ಗೃಹ ಸಚಿವ": ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು, ಎ. 6: ‘ಆರಗ ಜ್ಞಾನೇಂದ್ರ ಅವರೇ ನೀವೊಬ್ಬ ಅಪ್ರಬುದ್ದ ರಾಜಕಾರಿಣಿ, ಅಸಮರ್ಥ ಗೃಹ ಸಚಿವ' ಎಂದು ಕಾಂಗ್ರೆಸ್ ಇಂದಿಲ್ಲಿ ವಾಗ್ದಾಳಿ ನಡೆಸಿದೆ.
ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗೃಹ ಸಚಿವರ ಮಾಹಿತಿಯ ‘ಸೋರ್ಸ್' ಪೊಲೀಸ್ ವರದಿ ಆಗಿರಬೇಕೇ ಹೊರತು ‘ವಾಟ್ಸಾಪ್ ಫಾರ್ವರ್ಡ್ ಮೆಸೇಜುಗಳಲ್ಲ!' ಎಂದು ಟೀಕಿಸಿದೆ.
‘ಬಿಜೆಪಿ ಟೋಪಿ ಹಾಕಿದಾಗ ಒಂದು ಮಾತು, ಟೋಪಿ ತೆಗೆದಾಗ ಮತ್ತೊಂದು ಮಾತು! ಬಿಜೆಪಿ ಟೋಪಿಯ ಮಹಿಮೆಯೇ ಅಂತದ್ದು! ‘ಸುಳ್ಳು' ತಕ್ಷಣ ಜಾಗೃತವಾಗಿಬಿಡುತ್ತದೆ!' ಎಂದು ಕಾಂಗ್ರೆಸ್, ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
‘ಆರಗ ಜ್ಞಾನೇಂದ್ರ ಅವರದ್ದು ಅಚಾತುರ್ಯ ಅಲ್ಲ, ಆತುರ ಹಾಗೂ ದಡ್ಡತನವೂ ಅಲ್ಲ. ಹೆಣವನ್ನು ಬಳಸಿಕೊಳ್ಳುವ ಟೂಲ್ ಕಿಟ್ ಮಾತುಗಳನ್ನಾಡಿದರು ಅಷ್ಟೇ. ಬಿಜೆಪಿ ಟೋಪಿ ಹಾಕಿದಾಗ ಹೆಣ ರಾಜಕೀಯದ ಮನಸ್ಥಿತಿ ಜಾಗೃತವಾಗಿತ್ತು, ಟೋಪಿ ತೆಗೆದಾಗ ವಾಸ್ತವದ ಅರಿವಾಯ್ತು. ಗೃಹ ಸಚಿವರಾದವರು ಪೊಲೀಸರ ಮಾಹಿತಿ ಪಡೆಯಬೇಕೆ ಹೊರತು ವಾಟ್ಸಾಪ್ ಯುನಿವರ್ಸಿಟಿಯದ್ದಲ್ಲ'
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ
'@JnanendraAraga ಅವರೇ ನೀವೊಬ್ಬ ಅಪ್ರಬುದ್ದ ರಾಜಕಾರಿಣಿ, ಅಸಮರ್ಥ ಗೃಹಸಚಿವ.
— Karnataka Congress (@INCKarnataka) April 6, 2022
ಗೃಹಸಚಿವರ ಮಾಹಿತಿಯ'ಸೋರ್ಸ್' ಪೊಲೀಸ್ ವರದಿ ಆಗಿರಬೇಕೇ ಹೊರತು 'ವಾಟ್ಸಾಪ್ ಫಾರ್ವರ್ಡ್ ಮೆಸೇಜುಗಳಲ್ಲ!
ಬಿಜೆಪಿ ಟೋಪಿ ಹಾಕಿದಾಗ ಒಂದು ಮಾತು, ಟೋಪಿ ತೆಗೆದಾಗ ಮತ್ತೊಂದು ಮಾತು!
ಬಿಜೆಪಿ ಟೋಪಿಯ ಮಹಿಮೆಯೇ ಅಂತದ್ದು! 'ಸುಳ್ಳು' ತಕ್ಷಣ ಜಾಗೃತವಾಗಿಬಿಡುತ್ತದೆ!
'@JnanendraAraga ಅವರದ್ದು ಅಚಾತುರ್ಯ ಅಲ್ಲ, ಆತುರ ಹಾಗೂ ದಡ್ಡತನವೂ ಅಲ್ಲ. ಹೆಣವನ್ನು ಬಳಸಿಕೊಳ್ಳುವ ಟೂಲ್ ಕಿಟ್ ಮಾತುಗಳನ್ನಾಡಿದರು ಅಷ್ಟೇ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 6, 2022
ಬಿಜೆಪಿ ಟೋಪಿ ಹಾಕಿದಾಗ ಹೆಣ ರಾಜಕೀಯದ ಮನಸ್ಥಿತಿ ಜಾಗೃತವಾಗಿತ್ತು, ಟೋಪಿ ತೆಗೆದಾಗ ವಾಸ್ತವದ ಅರಿವಾಯ್ತು.
ಗೃಹಸಚಿವರಾದವರು ಪೊಲೀಸರ ಮಾಹಿತಿ ಪಡೆಯಬೇಕೆ ಹೊರತು ವಾಟ್ಸಾಪ್ ಯುನಿವರ್ಸಿಟಿಯದ್ದಲ್ಲ. pic.twitter.com/fe2sU6MYtv







