ಪಾಕ್: ರಾಜಕೀಯ ಬಿಕ್ಕಟ್ಟು ಮುಂದುವರಿಕೆ; ಚುನಾವಣೆಗೆ ದಿನ ನಿಗದಿಗೆ ಅಧ್ಯಕ್ಷರ ಸೂಚನೆ

PHOTO COURTEST:TWITTER
ಇಸ್ಲಮಾಬಾದ್, ಎ.6: ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಸಾರ್ವತ್ರಿಕ ಚುನಾವಣೆಗೆ ದಿನ ನಿಗದಿಗೊಳಿಸುವಂತೆ ಅಧ್ಯಕ್ಷ ಆರಿಫ್ ಆಲ್ವಿ ಚುನಾವಣಾ ಆಯೋಗಕ್ಕೆ ಬುಧವಾರ ಸೂಚಿಸಿದ್ದಾರೆ. ಸಂವಿಧಾನದ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚುನಾವಣೆಯ ದಿನಾಂಕವನ್ನು ಶಿಫಾರಸು ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆ ತಿಳಿಸಿದೆ. ಆದರೆ, ಸಂಸತ್ತು ವಿಸರ್ಜನೆಯ ಸಂದರ್ಭ ಪ್ರಧಾನಿ ಇಮ್ರಾನ್ಖಾನ್ ಘೋಷಿಸಿದಂತೆ, 90 ದಿನದ ಒಳಗೆ ಸಾರ್ವತ್ರಿಕ ಚುನಾವಣೆ ನಡೆಸಲು ಹಲವು ಅಡ್ಡಿಗಳಿವೆ ಎಂದು ಚುನಾವಣಾ ಆಯೋಗ ಮಂಗಳವಾರ ಹೇಳಿಕೆ ನೀಡಿದೆ.
ಈ ಮಧ್ಯೆ, ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ಣ ಚುನಾವಣೆ ನಡೆಸುವ ಅಧಿಕಾರ ಪ್ರಧಾನಿ ಇಮ್ರಾನ್ಖಾನ್ಗೆ ಇದೆಯೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಪಾಕಿಸ್ತಾನದ ಸುಪ್ರೀಂಕೋರ್ಟ್ನಲ್ಲಿ ಮುಂದುವರಿದಿದ್ದು ಈ ವಾರಾಂತ್ಯ ತೀರ್ಪು ಹೊರಬೀಳುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





