ಶಿಕ್ಷಣ ಹಕ್ಕು ಕಾಯಿದೆಯಿದೆ, ಸಾಕಷ್ಟು ಶಾಲೆಗಳೆಲ್ಲಿವೆ?: ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ ಕೊರ್ಟ್

ಹೊಸದಿಲ್ಲಿ: "ನೀವು ಒಂದು ಹಕ್ಕನ್ನು ರಚಿಸಿದ್ದೀರಿ. ಆದರೆ ಸಾಕಷ್ಟು ಶಾಲೆಗಳೆಲ್ಲಿವೆ?'' ಎಂದು ಶಿಕ್ಷಣ ಹಕ್ಕು ಕಾಯಿದೆಯನ್ನು ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ಆರ್ ಭಟ್ ಮತ್ತು ಪಿ ಎಸ್ ನರಸಿಂಹ ಅವರ ತ್ರಿಸದಸ್ಯ ಪೀಠ ಸರಕಾರವನ್ನು ಶಿಕ್ಷಣ ಹಕ್ಕು ಕಾಯಿದೆ ಕುರಿತಂತೆ ಪ್ರಶ್ನಿಸಿದೆ.
"ಕೆಲವೊಂದು ಸಂದರ್ಭ ಶಾಲೆಗಳನ್ನು ನಿರ್ಮಿಸಲು ಹಣವಿಲ್ಲದೇ ಇದ್ದರೆ ಶಾಲೆಗಳಿದ್ದರೂ ಶಿಕ್ಷಕರು ಹಾಗೂ ಸಿಬ್ಬಂದಿಯ ಕೊರತೆ ಇರುತ್ತದೆ, ಈ ಕುರಿತು ಪ್ರಶ್ನಿಸಿದರೆ ಹಣಕಾಸಿನ ಅಡಚಣೆಯ ನೆಪವೊಡ್ಡಲಾಗುತ್ತದೆ. ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸಿದಾಗ ಅದರ ಆರ್ಥಿಕ ಪರಿಣಾಮಗಳನ್ನೂ ಯೋಚಿಸಬೇಕೆಂಬ ಸಲಹೆ ನೀಡುತ್ತೇವೆ,'' ಎಂದು ಪೀಠ ಸರಕಾರಕ್ಕೆ ಹೇಳಿತು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯಿದೆ 2005 ಇದರಡಿಯಲ್ಲಿ ಒದಗಿಸಲಾಗುವುದೆಂದು ಹೇಳಲಾದ ರಕ್ಷಣಾ ಅಧಿಕಾರಿಗಳು ಮತ್ತು ಆಶ್ರಯ ತಾಣಗಳ ಕೊರತೆ ಕುರಿತಂತೆ ಎನ್‍ಜಿಒ ಒಂದು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.
Next Story





