ಬೆಂಗಳೂರು, ಎ.7: ನಾಳೆ (ಎ.8ರಂದು) ನಡೆಯಬೇಕಿದ್ದ 56ನೇ ಬೆಂಗಳೂರು ವಿವಿ ಘಟಿಕೋತ್ಸವದ ದಿನಾಂಕವನ್ನುಮುಂದೂಡಲಾಗಿದೆ.
ಎಪ್ರಿಲ್ 8ರಂದು ನಿಗದಿಯಾಗಿದ್ದ 56ನೇ ಘಟಿಕೋತ್ಸವವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಎಪ್ರಿಲ್ ಕೊನೆ ವಾರದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ. ಶೀಘ್ರವೇ ದಿನಾಂಕ ಪ್ರಕಟಿಸುವುದಾಗಿ ಬೆಂಗಳೂರು ವಿವಿಯಿಂದ ಮಾಧ್ಯಮ ಪ್ರಕಟನೆ ಹೊರಡಿಸಲಾಗಿದೆ.