ಚಾಂಪಿಯನ್ಸ್ ಲೀಗ್: ಕರೀಮ್ ಬೆಂಝೆಮಾ ಹ್ಯಾಟ್ರಿಕ್ ಗೋಲು, ರಿಯಲ್ ಮ್ಯಾಡ್ರಿಡ್ ಗೆ ಭರ್ಜರಿ ಜಯ

Photo:twitter
ಲಂಡನ್: ಫ್ರೆಂಚ್ ಸ್ಟ್ರೈಕರ್ ಕರೀಮ್ ಬೆಂಝೆಮಾ ತಾನೋರ್ವ ವಿಶ್ವದ ಅತ್ಯಂತ ಉತ್ತಮ ಗೋಲ್ ಸ್ಕೋರರ್ಗಳಲ್ಲಿ ಒಬ್ಬರು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ರಿಯಲ್ ಮ್ಯಾಡ್ರಿಡ್ ನಾಯಕ ಬುಧವಾರ ಸ್ಟ್ಯಾಮ್ಫೋರ್ಡ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಕ್ವಾರ್ಟರ್-ಫೈನಲ್ ನ ಮೊದಲ ಚರಣದಲ್ಲಿ ಚೆಲ್ಸಿ ವಿರುದ್ಧ ಆಕರ್ಷಕ ಹ್ಯಾಟ್ರಿಕ್ ಗೋಲು ಗಳಿಸಿದರು.
ಬೆಂಝೆಮಾ ಅವರ ಹ್ಯಾಟ್ರಿಕ್ ಗೋಲು ನೆರವಿನಿಂದ ರಿಯಲ್ ಮ್ಯಾಡ್ರಿಡ್ ನಿರ್ಣಾಯಕ 3-1 ಅಂತರದ ಗೆಲುವನ್ನು ದಾಖಲಿಸಿತು ಹಾಗೂ ಟೂರ್ನಿಯಲ್ಲಿ ಅಂತಿಮ-4ರ ಹಂತಕ್ಕೆ ಲಗ್ಗೆ ಇಡಬಲ್ಲ ನೆಚ್ಚಿನ ತಂಡವಾಗಿ ಹೊರಹೊಮ್ಮಿತು.
ಬೆಂಝೆಮಾ ಅವರು 21ನೇ, 24ನೇ ಹಾಗೂ 46ನೇ ನಿಮಿಷದಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಪೂರೈಸಿದರು. ಚೆಲ್ಸಿ 40ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿತು.
Karim @Benzema vs Chelsea
— Ralphie (@powellyowl) April 6, 2022
The Motion pic.twitter.com/0dsyHLWtYU
Next Story







