ಅಕ್ರಮ ಹಣ ವರ್ಗಾವಣೆ ಪ್ರಕರಣ: ಉಮರ್ ಅಬ್ದುಲ್ಲಾರನ್ನು ವಿಚಾರಣೆ ನಡೆಸಿದ ಇಡಿ

ಮುಂಬೈ: ಜಮ್ಮು-ಕಾಶ್ಮೀರ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ವಿಚಾರಣೆ ನಡೆಸಿದೆ ಎಂದು NDTV ವರದಿ ಮಾಡಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಹಿಂದೆ ಜಮ್ಮು-ಕಾಶ್ಮೀರ ಬ್ಯಾಂಕ್ ಮಾಜಿ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಶೇಖ್ ಮತ್ತು ಇತರರ ವಿರುದ್ಧ ಸಾಲ ಹಾಗೂ ಹೂಡಿಕೆಗಳ ಮಂಜೂರಾತಿಯಲ್ಲಿ ಅಕ್ರಮಗಳ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.
ಸಿಬಿಐನ ಎಫ್‌ಐಆರ್ ಆಧಾರದಲ್ಲಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ (ಪಿಎಂಎಲ್‌ಎ) ತನಿಖೆಯನ್ನು ಆರಂಭಿಸಿದೆ.
Next Story





