ದಲಿತ ಹಕ್ಕುಗಳ ಸಮಿತಿಗೆ ಆಯ್ಕೆ
ಮಂಗಳೂರು : ದಲಿತ ಹಕ್ಕುಗಳ ಸಮಿತಿ ಮಂಗಳೂರು ಇದರ ಸಮಾವೇಶವು ಇತ್ತೀಚೆಗೆ ನಗರದ ಯುಬಿಎಂಸಿ ಶಾಲಾ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಸಮಿತಿಯ ನೂತನ ನಗರ ಅಧ್ಯಕ್ಷರಾಗಿ ರಾಧಾಕೃಷ್ಣ ಬಿ. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕೃಷ್ಣ ಪಿ.ಎ. ತಣ್ಣೀರುಬಾವಿ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಶೇಖರ್ ಕೆ, ಶಶಿಕಲಾ ಪೊರ್ಕೋಡಿ, ಶಿವಾನಂದ ಕುಳಾಯಿ, ಬೇಬಿ ತಣ್ಣೀರುಬಾವಿ, ನಾಗೇಂದ್ರ ಉರ್ವಸ್ಟೋರ್, ಜೊತೆ ಕಾರ್ಯದರ್ಶಿಗಳಾಗಿ ಹೇಮಾ ಪಚ್ಚನಾಡಿ, ಸುರೇಶ್ ಬಿಜೈ, ಪ್ರದೀಪ್ ಕೊಂಚಾಡಿ, ಪ್ರಶಾಂತ್ ಕುದ್ಕೋರಿ ಗುಡ್ಡೆ, ಅಚ್ಯುತ ಕಾವೂರು, ಕೋಶಾಧಿಕಾರಿಯಾಗಿ ರಘುವೀರ್ ಉರ್ವಸ್ಟೋರ್ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಸುರೇಖಾ ಕಾಪಿಕಾಡು, ರಮೇಶ್ ದಡ್ಡಲ್ ಕಾಡು, ವೆಂಕಟೇಶ್ ಕೊಂಚಾಡಿ, ಕಮಲಾ ಶಿವನಗರ, ಚಂದ್ರ ನಾಯ್ಕ್, ಲಲಿತಾ, ರಾಮಕೃಷ್ಣ ನಂತೂರು, ರೋಹಿತ್ ಕಿನ್ಯಾ, ಸುಧಾಕರ ಉರ್ವಸ್ಟೋರ್, ಮಾಧವ ತಣ್ಣೀರುಬಾವಿ, ಚಂದ್ರಶೇಖರ್ ಕೊಂಚಾಡಿ, ನಾಗೇಶ್ ಕುಮಾರ್ ಕೆ, ಮನೋಜ್, ಇಕ್ಬಾಲ್ ಆಯ್ಕೆಯಾಗಿದ್ದಾರೆ.
Next Story





