ಸಾಹಿತಿ, ಕಲಾವಿದರ ದತ್ತಾಂಶ ಸಂಗ್ರಹಕ್ಕೆ ಆನ್‌ಲೈನ್ ನೋಂದಣಿ ಯೋಜನೆ
ಮಂಗಳೂರು : ಸಾಹಿತಿ, ಕಲಾವಿದರ ದತ್ತಾಂಶ ಸಂಗ್ರಹಕ್ಕೆ ಆನ್‌ಲೈನ್ ಮೂಲಕ ನೊಂದಾಯಿಸುವ ಯೋಜನೆಯಡಿ ಬ್ಯಾರಿ ಸಾಹಿತಿ/ಕಲಾವಿದರು ಸೇವಾಸಿಂಧು ಪೋರ್ಟಲ್ sevasindhu.karnataka.gov.in ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಬಹುದು.
ಸಾಹಿತಿಗಳು ಕನಿಷ್ಟ 1 ಪುಸ್ತಕ ಪ್ರಕಟಿಸಿರಬೇಕು. ಚಿತ್ರ, ಶಿಲ್ಪಕಲಾವಿದರು ಕನಿಷ್ಠ 5 ಕಲಾಕೃತಿ ರಚಿಸಿರಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರ ಸ್ಪಷ್ಟವಾಗಿ ನಮೂದಿಸಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಆರ್. ಮನೋಹರ್ ಕಾಮತ್ ತಿಳಿಸಿದ್ದಾರೆ.
Next Story





