ಸಂಚಾರಿ ನಿಯಮ ಉಲ್ಲಂಘನೆ: ನಟ ಅಲ್ಲು ಅರ್ಜುನ್ಗೆ ದಂಡ ವಿಧಿಸಿದ ಪೊಲೀಸರು

ನಟ ಅಲ್ಲು ಅರ್ಜುನ್ (PTI)
ಹೈದರಾಬಾದ್: ಸಂಚಾರಿ ನಿಯಮ ಉಲ್ಲಂಘಿಸಿದಕ್ಕಾಗಿ ತೆಲುಗು ಸಿನೆಮಾ ನಟ ಅಲ್ಲು ಅರ್ಜುನ್ ದಂಡ ಕಟ್ಟಿದ್ದಾರೆ ಎಂದು ವರದಿಯಾಗಿದೆ.
ಅಲ್ಲು ಅರ್ಜುನ್ ಗುರುವಾರ ಪೊಲೀಸರಿಗೆ 700 ರುಪಾಯಿ ದಂಡ ಕಟ್ಟಿರುವುದಾಗಿ ಅವರ ಮ್ಯಾನೇಜರ್ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಹೈದರಾಬಾದ್ ನಗರದಲ್ಲಿ ಅಲ್ಲು ತಿರುಗಾಡಿದ್ದರು. ಈ ಸಂದರ್ಭದಲ್ಲಿ ಅವರ ಕಾರ್ ಗಾಜಿಗೆ ಟಿಂಟ್ ಬಳಸಿ, ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸರು ₹ 700 ದಂಡ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ತಮ್ಮ ಮ್ಯಾನೇಜರ್ ಮೂಲಕ ದಂಡ ಪಾವತಿಸಿದ್ದಾರೆ ಎಂದು ವರದಿಯಾಗಿದೆ.
Next Story