ಎಲ್ಲಾ ಸಚಿವರಿಂದ ರಾಜಿನಾಮೆ ಪಡೆದ ಆಂಧ್ರ ಸಿಎಂ: ಹೊಸ ಸಂಪುಟಕ್ಕೆ ಜಗನ್ ಮೋಹನ್ ರೆಡ್ಡಿ ಸಜ್ಜು

ಹೈದರಾಬಾದ್: ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯನ್ನು ಹೊರತು ಪಡಿಸಿ ರಾಜ್ಯ ಸಂಪುಟದ ಎಲ್ಲಾ ಸದಸ್ಯರು ರಾಜಿನಾಮೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.
ತಮ್ಮ ಅಧಿಕಾರವಧಿಯಲ್ಲಿ ಅರ್ಧದಷ್ಟು ಮುಗಿದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆಗಳನ್ನು ಮಾಡಲಾಗಿದೆಯೆಂದು ಹೇಳಲಾಗಿದೆ.
ಕ್ಯಾಬಿನಟ್ ಸಭೆಯ ಬಳಿಕ ಸಂಪುಟದ 24 ಸಚಿವರು ರಾಜಿನಾಮೆಯನ್ನು ನೀಡಿದ್ದು, ಜಗನ್ ಮೋಹನ್ ರೆಡ್ಡಿ ರಾಜಿನಾಮೆ ಪತ್ರಗಳನ್ನು ಸ್ವೀಕರಿಸಿಕೊಂಡಿದ್ದಾರೆ.
ಅಧಿಕಾರವಾಧಿಯ ಅರ್ಧ ಅವಧಿಯ ಬಳಿಕ ತಮ್ಮ ಇಡೀ ತಂಡವನ್ನು ಬದಲಾಯಿಸುವುದಾಗಿ ರೆಡ್ಡಿ ಈ ಹಿಂದೆಯೇ ಹೇಳಿದ್ದರಿಂದ ಈ ವಿಸರ್ಜನೆಯನ್ನು ಈಗಾಗಲೇ ನಿರೀಕ್ಷಿಸಲಾಗಿತ್ತು. ಇದು 2021 ರ ಡಿಸೆಂಬರಲ್ಲೇ ನಡೆಯಬೇಕಿತ್ತು, ಕೋವಿಡ್ ಕಾರಣ ಮುಂದೂಡಲಾಗಿತ್ತು ಎಂದು ಹೇಳಲಾಗಿದೆ.
Next Story





