ಯುವತಿ ನಾಪತ್ತೆ

ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್ ಬಳಿಯ ರೀಗಲ್ ಪ್ಯಾಲೇಸ್ ಲಾಡ್ಜ್ ನಿಂದ ಪ್ರೇಮಾ (19) ಎಂಬಾಕೆ ಮಾ.4ರಂದು ಕಾಣೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೪.೫ ಅಡಿ ಎತ್ತರ, ಕಪ್ಪುಮೈ ಬಣ್ಣ, ದಪ್ಪಶರೀರ, ಬಲ ಕೈಯ ಮಧ್ಯ ಬೆರಳು ತುಂಡಾಗಿರುತ್ತದೆ. ಕೆಂಪು ಬಣ್ಣದ ಚೂಡಿದಾರ ಹಾಗೂ ಕಪ್ಪುಬಣ್ಣದ ಶಾಲು ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಈಕೆಯನ್ನು ಕಂಡವರು ಪೊಲೀಸ್ ಕಂಟ್ರೋಲ್ ರೂಮ್ ದೂ.ಸಂ:೦೮೨೪-೨೨೨೦೮೦೦, ಪೊಲೀಸ್ ಠಾಣೆ ದೂ.ಸಂ:೦೮೨೪-೨೨೨೦೫೧೮ ಪೊಲೀಸ್ ಇನ್ಸ್‌ಪೆಕ್ಟರ್ ಮೊ.ಸಂ: ೯೪೮೦೮೦೫೩೩೯ ನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Next Story