ಎ.ಜೆ. ದಂತ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ

ಮಂಗಳೂರು : ಎಜೆ ದಂತ ವೈದ್ಯಕೀಯ ಕಾಲೇಜಿನ ಸಮುದಾಯ ದಂತ ಚಿಕಿತ್ಸ ವಿಭಾಗ, ಎನ್ನೆಸ್ಸೆಸ್ ಯೂನಿಟ್ ಹಾಗು ಇಂಡಿಯನ್ ಡೆಂಟಲ್ ಅಸೋಸಿಯೇಶನ್ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ವಿಶ್ವ ಅರೋಗ್ಯ ದಿನ ಆಚರಿಸಲಾಯಿತು.
ದ.ಕ.ಜಿಲ್ಲಾ ಡಿಡಿಪಿಐ ಸುಧಾಕರ ಕೆ. ಹಾಗು ಎಜೆ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ನಿಲ್ಲನ್ ಶೆಟ್ಟಿ ಉದ್ಘಾಟಿಸಿದರು. ಕ್ಯಾನ್ಸರ್ ಹಾಗು ಅದರ ಪರಿಣಾಮಗಳು ಮತ್ತು ಪ್ರಾರಂಭಿಕ ಹಂತದಲ್ಲಿ ಅದರ ತಡೆಗಟ್ಟುವ ವಿಧಾನಗಳ ಬಗ್ಗೆ ದ.ಕ. ಜಿಲ್ಲೆಯ ಶಿಕ್ಷಕರಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಾಜಿದ್, ಡಾ.ಅನುರಾಧ ಭಾಗವಹಿಸಿದ್ದರು.
ಇಂಡಿಯನ್ ಡೆಂಟಲ್ ಅಸೋಸಿಯೇಶನ್ ದ.ಕ. ಘಟಕದ ಕಾರ್ಯದರ್ಶಿ ಡಾ. ಭರತ್ ಪ್ರಭು, ಖಜಾಂಚಿ ಡಾ.ಪ್ರಸನ್ನ ಕುಮಾರ್, ಎನ್ನೆಸ್ಸೆಸ್ ಯೂನಿಟ್ ಮುಖ್ಯಸ್ಥೆ ಡಾ. ಶ್ರೇಷ್ಟ ಶೆಟ್ಟಿ ಉಪಸ್ಥಿತರಿದ್ಧರು.
ಸಮುದಾಯ ದಂತ ಚಿಕಿತ್ಸ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಸ್ವಾಗತಿಸಿದರು. ಡಾ. ಧೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
Next Story





