ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್ ವಿರುದ್ಧ ದೂರು

ಬೆಂಗಳೂರು, ಎ.7: ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಜಗದೀಶ್ ಕೆ.ಎನ್.ಮಹಾದೇವ್ ಅವರ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸುವಂತೆ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಗೆ ಆರ್‍ಟಿಐ ಕಾರ್ಯಕರ್ತ ವೆಂಕಟೇಶ ದೂರು ಸಲ್ಲಿಸಿದ್ದಾರೆ.
ನಕಲಿ ಅಂಕಪಟ್ಟಿ ಸಲ್ಲಿಸಿ ಜಗದೀಶ್ ಅವರು ಕಾನೂನು ಪದವಿ ಪಡೆದಿರುವ ವಿಷಯ ಅವರ ಫೇಸ್‍ಬುಕ್ ಸ್ನೇಹಿತನಿಂದ ತಿಳಿದಿತ್ತು. ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಪಡೆದು ಪರಿಶೀಲಿಸಿದಾಗ ಅದು ಉದಯಪುರದ ರಾಜಸ್ಥಾನ ವಿದ್ಯಾಪೀಠದಿಂದ ನೀಡಿರುವುದು ಗಮನಕ್ಕೆ ಬಂದಿತ್ತು.
ಅವರು 600ಕ್ಕೆ 388 ಅಂಕ ಗಳಿಸಿರುವುದನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ರಾಜಸ್ಥಾನ ವಿದ್ಯಾಪೀಠವು ರಾಜಸ್ಥಾನ ಸೆಕೆಂಡರಿ ಎಜುಕೇಷನ್ ಬೋರ್ಡ್‍ನಿಂದ ಯಾವುದೇ ಮಾನ್ಯತೆ ಗಳಿಸಿಲ್ಲ. ಈ ಸಂಬಂಧ ತನಿಖೆ ನಡೆಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಾನು ವ್ಯಾಸಂಗ ಮಾಡಿರುವ ರಾಜಸ್ಥಾನ ವಿದ್ಯಾಪೀಠವು ಯುಜಿಸಿಯಿಂದ ಮಾನ್ಯತೆ ಹೊಂದಿದೆ. ನ್ಯಾಕ್‍ನಿಂದ ‘ಎ’ ಗ್ರೇಡ್ ಪಡೆದಿದೆ. ಇಂತಹ ಆರೋಪಗಳಲ್ಲಿ ಹುರುಳಿಲ್ಲ.
-ಜಗದೀಶ್, ಕೆ.ಎನ್.ಮಹಾದೇವ್, ನ್ಯಾಯವಾದಿ





