ಇಮ್ರಾನ್ ಖಾನ್ಗೆ ತೀವ್ರ ಹಿನ್ನಡೆ: ಅವಿಶ್ವಾಸ ನಿರ್ಣಯ ಮತದಾನಕ್ಕೆ ಪಾಕ್ ಸುಪ್ರೀಂ ಆದೇಶ

ಇಮ್ರಾನ್ ಖಾನ್ (PTI)
ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿರುವುದು "ಅಸಂವಿಧಾನಿಕ" ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ರಾಷ್ಟ್ರೀಯ ಅಸೆಂಬ್ಲಿಯನ್ನು ಪುನರ್ ರಚಿಸಲು ಮತ್ತು ಅಧಿವೇಶನವನ್ನು ಕರೆಯಲು ಸ್ಪೀಕರ್ಗೆ ನ್ಯಾಯಾಲಯ ಆದೇಶಿಸಿದೆ. ಇದು ಪ್ರಧಾನಿ ಇಮ್ರಾನ್ ಖಾನ್ಗೆ ತೀವ್ರ ಹಿನ್ನಡೆಯಾಗಿದ್ದು, ಎಪ್ರಿಲ್ 9 ರಂದು ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯವನ್ನು ಎದುರಿಸಲಿದ್ದಾರೆ.
ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನವನ್ನು ತಡೆಯುವ ಸಲುವಾಗಿ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲು ಅಧ್ಯಕ್ಷ ಆರಿಫ್ ಅಲ್ವಿ ಅವರಿಂದ ಇಮ್ರಾನ್ ಖಾನ್ ಅನುಮೋದನೆ ಪಡೆದುಕೊಂಡಿದ್ದರು.
ಸಂಸತ್ತು ವಿಸರ್ಜಿಸಿ ಹೊಸ ಚುನಾವಣೆಗೆ ಇಮ್ರಾನ್ ಖಾನ್ ಕರೆ ನೀಡಿದ್ದರು. ಈ ಕ್ರಮವನ್ನು "ಅಸಂವಿಧಾನಿಕ" ಎಂದು ಬಣ್ಣಿಸಿದ ವಿರೋಧ ಪಕ್ಷಗಳು, ಸ್ಪೀಕರ್ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದವು.
Next Story





