ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಎಲ್ಲ ವಯಸ್ಕರಿಗೆ ಕೋವಿಡ್ ಬೂಸ್ಟರ್ ಲಸಿಕೆ ಲಭ್ಯ

ಹೊಸದಿಲ್ಲಿ: ಖಾಸಗಿ ಲಸಿಕೆ ಕೇಂದ್ರಗಳಲ್ಲಿ ರವಿವಾರದಿಂದ ಎಲ್ಲ ವಯಸ್ಕರಿಗೆ ಕೋವಿಡ್ ಬೂಸ್ಟರ್ ಲಸಿಕೆಗಳು ಲಭ್ಯವಿರುತ್ತವೆ ಎಂದು ಸರಕಾರ ಶುಕ್ರವಾರ ಪ್ರಕಟಿಸಿದೆ ಎಂದು NDTV ವರದಿ ಮಾಡಿದೆ.
ಸರಕಾರದ ಆದೇಶದ ಪ್ರಕಾರ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೊರತುಪಡಿಸಿ ಹೆಚ್ಚಿನ ವಯಸ್ಕರಿಗೆ ಮೂರನೇ ಲಸಿಕೆ ಉಚಿತವಾಗಿರುವುದಿಲ್ಲ.
"ಪ್ರಥಮ ಮತ್ತು ಎರಡನೇ ಡೋಸ್‌ಗಾಗಿ ಸರಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಹಾಗೂ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60+ ವಯೋಮಾನದವರಿಗೆ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ ಹಾಗೂ ಅದನ್ನು ವೇಗಗೊಳಿಸಲಾಗುವುದು" ಎಂದು ಸರಕಾರದ ಹೇಳಿಕೆ ತಿಳಿಸಿದೆ.
Next Story





