ಹರಾಜಿನಲ್ಲಿ 3.1 ಮಿಲಿಯನ್ ಡಾಲರ್ ಗಳಿಸಿದ 1940ರ ಕಾಮಿಕ್ಸ್ ಪುಸ್ತಕ

PHOTO:TWITTER/@Forbes
ಲಾಸ್ಏಂಜಲೀಸ್, ಎ.8: ‘ಕ್ಯಾಪ್ಟನ್ ಅಮೆರಿಕಾ ಕಾಮಿಕ್ಸ್ ನಂ.1’ ಎಂಬ 1940ರಲ್ಲಿ ಪ್ರಕಟವಾದ ಜನಪ್ರಿಯ ಕಾಮಿಕ್ಸ್ ಪುಸ್ತಕ ಲಾಸ್ಏಂಜಲೀಸ್ನಲ್ಲಿ ಶುಕ್ರವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 3.1 ಮಿಲಿಯನ್ ಡಾಲರ್ ಮೌಲ್ಯಕ್ಕೆ ಹರಾಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2014ರಲ್ಲಿ ಸ್ಪೈಡರ್ ಮ್ಯಾನ್ ಕಾಮಿಕ್ಸ್ ಪುಸ್ತಕ ಹರಾಜಿನಲ್ಲಿ ಗಳಿಸಿದ 3.6 ಮಿಲಿಯನ್ ಡಾಲರ್ ಸಾರ್ವಕಾಲಿಕ ದಾಖಲೆ ಮೊತ್ತವಾಗಿದ್ದು ಇದೀಗ ಕ್ಯಾಪ್ಟನ್ ಅಮೆರಿಕಾ ಕಾಮಿಕ್ಸ್ ಪುಸ್ತಕ 2ನೇ ಸ್ಥಾನ ಗಳಿಸಿದೆ. 1940ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ಈ ಕಾಮಿಕ್ಸ್ ಪುಸ್ತಕದ ಮುಖಪುಟದಲ್ಲಿ ಹೀರೊ ನಾಝಿ ಮುಖಂಡ ಅಡಾಲ್ಫ್ ಹಿಟ್ಲರನ ಮುಖಕ್ಕೆ ಮುಷ್ಟಿಯಿಂದ ಗುದ್ದುವ ಚಿತ್ರವಿದ್ದು ಅಪಾರ ಜನಪ್ರಿಯತೆ ಗಳಿಸಿತ್ತು. ಕ್ಯಾಪ್ಟನ್ ಅಮೆರಿಕ ಪಾತ್ರವನ್ನು ಜೋ ಸೈಮನ್ ಮತ್ತು ಜಾಕ್ ಕಿರ್ಬಿ ಸೃಷ್ಟಿಸಿದ್ದರು. 2011ರಲ್ಲಿ ಕ್ಯಾಪ್ಟನ್ ಅಮೆರಿಕಾ: ದಿ ಫರ್ಸ್ಟ್ ಅವೆಂಜರ್’ ಎಂಬ ಹೆಸರಿನಲ್ಲಿ ನಿರ್ಮಾಣವಾದ ಸಿನೆಮದಲ್ಲಿ ಹಾಲಿವುಡ್ ಸ್ಟಾರ್ನಟ ಕ್ರಿಸ್ ಇವಾನ್ಸ್ ಕ್ಯಾಪ್ಟನ್ ಅಮೆರಿಕಾ ಪಾತ್ರ ಮಾಡಿದ್ದರು





