ವಿಟ್ಲ: ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ಬಂಟ್ವಾಳ: ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ವಿಟ್ಲದ ಅಳಿಕೆ ಗ್ರಾಮದ ಪಡೀಲ್ ಎಂಬಲ್ಲಿ ನಡೆದಿದೆ.
ಅಳಿಕೆ ಗ್ರಾಮದ ಪಡೀಲ್ ನಿವಾಸಿ ಹಮೀದ್ (54) ಮೃತ ವ್ಯಕ್ತಿ.
ಅವರು ತಮ್ಮ ಮನೆಯ ತೋಟದ ಕೆರೆ ಬದಿಯಲ್ಲಿ ತೆಂಗಿನಕಾಯಿ ಹೆಕ್ಕುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಮನೆಯಿಂದ ತೋಟದ ಕಡೆಗೆ ಹೊರಟ ಹಮೀದ್ ಅವರು ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ತೋಟದಲ್ಲಿ ಹುಡುಕುತ್ತಾ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ ಮತ್ತು 4 ಮಕ್ಕಳನ್ನು ಅಗಲಿದ್ದಾರೆ.
Next Story