ಉಡುಪಿ ಜಯಂಟ್ಸ್ ಅಧ್ಯಕ್ಷರಾಗಿ ಇಕ್ಬಾಲ್ ಮನ್ನಾ ಆಯ್ಕೆ

ಇಕ್ಬಾಲ್ ಮನ್ನಾ
ಉಡುಪಿ : ಉಡುಪಿಯ ಜಯಂಟ್ಸ್ ಗ್ರೂಪ್ನ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಕುರಿತ ಚುನಾವಣಾ ಸಭೆಯು ಇತ್ತೀಚೆಗೆ ಉಡುಪಿಯ ರಾಮಕೃಷ್ಣ ಹೋಟೆಲ್ನಲ್ಲಿ ಜರಗಿತು.
ಅಧ್ಯಕ್ಷರಾಗಿ ಎಂ.ಇಕ್ಬಾಲ್ ಮನ್ನಾ, ಉಪಾಧ್ಯಕ್ಷರುಗಳಾಗಿ ಯಶವಂತ ಸಾಲಿಯಾನ್, ವಿನ್ಸೆಂಟ್ ಸಲ್ದಾನ್ಹಾ, ಆಡಳಿತ ನಿರ್ದೇಶಕರಾಗಿ ರೋಶನ್ ಬಲ್ಲಾಳ್, ಜಂಟಿ ನಿರ್ದೇಶಕರಾಗಿ ಉಷಾ ರಮೇಶ್, ಹಣಕಾಸು ನಿರ್ದೇಶಕ ರಾಗಿ ಗಣೇಶ್ ಉರಲ್, ಜಂಟಿ ನಿರ್ದೇಶಕರಾಗಿ ಚಂದ್ರಕಲಾ ದೇವದಾಸ್, ನಿರ್ದೇಶಕರುಗಳಾಗಿ ದಯಾನಂದ ಕಲ್ಮಾಡಿ, ವಿನಯ್ ಕುಮಾರ್ ಪೂಜಾರಿ, ವಾದಿರಾಜ್ ಸಾಲಿಯಾನ್, ಲಿಯಾಕತ್ ಅಲಿ, ಗಣೇಶ್ ಶೆಟ್ಟಿಗಾರ್ ಆಯ್ಕೆಯಾದರು.
ಸಭೆಯಲ್ಲಿ ಜೈಂಟ್ಸ್ ಇಂಟರ್ ನ್ಯಾಷನಲ್ ಕೇಂದ್ರ ಸಮಿತಿ ಸದಸ್ಯರಾದ ಲಕ್ಷ್ಮೀಕಾಂತ್ ಬೆಸ್ಕೂರ್, ರಮೇಶ್ ಪೂಜಾರಿ, ತೇಜೇಶ್ವರ ರಾವ್, ದಿನಕರ್ ಕೆ.ಅಮೀನ್ ಉಪಸ್ಥಿತರಿದ್ದರು.
Next Story





