ಉಳ್ಳಾಲ: ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮ

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ರಂಝಾನ್ ಪ್ರಯುಕ್ತ ಕಿಟ್ ವಿತರಣಾ ಕಾರ್ಯಕ್ರಮ ಟ್ರಸ್ಟ್ ಅಧ್ಯಕ್ಷ ತ್ವಾಹಾ ಹಾಜಿ ಅವರ ಅಧ್ಯಕ್ಷತೆಯಲ್ಲಿ ರಾಯಲ್ ಗಾರ್ಡನ್ ಸೀ ಗ್ರೌಂಡ್ ನಲ್ಲಿ ನಡೆಯಿತು.
ದರ್ಗಾ ಅರೆಬಿಕ್ ಟ್ರಸ್ಟ್ ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ ತೋಡಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಡ ಯುವತಿಯರ ಕಲ್ಯಾಣ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲು ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಯು.ಎಸ್ ಹನೀಫ್, ಕಾರ್ಯ ದರ್ಶಿ ಕೆ.ಎನ್ ಮುಹಮ್ಮದ್, ರಹ್ಮತುಲ್ಲಾ, ಬಿ.ಎಚ್.ಖಾದರ್, ಹಾಜಿ ಇಬ್ರಾಹಿಂ ಕಕ್ಕೆತೋಟ, ಯು.ಪಿ.ಹಮೀದ್ ಮುಹಮ್ಮದ್ ಆಸೀಫ್, ಮುಹಮ್ಮದ್ ಪರ್ವೇಝ್ ಮತ್ತಿತರರು ಉಪಸ್ಥಿತರಿದ್ದರು
Next Story





