ಉಳ್ಳಾಲ ದರ್ಗಾಕ್ಕೆ ದ.ಕ. ಜಿಲ್ಲಾ ವಕ್ಫ್ ನೂತನ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್ ಭೇಟಿ

ಉಳ್ಳಾಲ : ದ.ಕ.ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ರವರು ಉಳ್ಳಾಲ ದರ್ಗಾ ಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರನ್ನು ಬರಮಾಡಿ ಸ್ವಾಗತಿಸಿದ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರು ದರ್ಗಾ ಸಮಿತಿಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿದರು.
ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿ, ಜನಮನ ಪ್ರೀತಿಗೆ ಅರ್ಹರಾಗಿರುವ ಅಬ್ದುಲ್ ನಾಸಿರ್ ರವರು ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗುವ ಮೂಲಕ ಮುಸ್ಲಿಂ ಸಮುದಾಯದ ಸಮಯೋಚಿತ ಬೇಡಿಕೆಗಳು ಫಲ ಕಾಣುವಂತಾಗಲಿ ಎಂದು ಈ ಸಂದರ್ಭದಲ್ಲಿ ಹಾಜಿ ಅಬ್ದುಲ್ ರಶೀದ್ ಹಾರೈಸಿದರು.
ವಕ್ಫ್ ಸದಸ್ಯರಾಗಿ ನೇಮಕಾತಿ ಗೊಂಡ ಸೈದುದ್ದೀನ್ ಮತ್ತು ಸಿರಾಜುದ್ದೀನ್ ರನ್ನೂ ಉಳ್ಳಾಲ ದರ್ಗಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಪ್ರ.ಕಾರ್ಯದರ್ಶಿ ತ್ವಾಹ ಹಾಜಿ, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಕಾರ್ಯ ದರ್ಶಿ ಅಝಾದ್ ಇಸ್ಮಾಯಿಲ್, ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಮ್ ಕಕ್ಕೆತೋಟ, ಕೋಶಾಧಿಕಾರಿ ಜೆ.ಹಮೀದ್, ಕಾರ್ಯದರ್ಶಿ ಎ.ಕೆ.ಮೊಯ್ದಿನ್, ಆಡಳಿತ ಸಮಿತಿಯ ಅಲಿಮೋನು, ಕೆ.ಎನ್. ಮುಹಮ್ಮದ್, ಹಸೈನಾರ್, ಖಲೀಲ್ ಮುಂತಾದವರು ಉಪಸ್ಥಿತರಿದ್ದರು.