ಬ್ರಹ್ಮಾವರ: ಪತ್ರ ಬರೆದಿಟ್ಟು ಮಹಿಳೆ ನಾಪತ್ತೆ
ಬ್ರಹ್ಮಾವರ : ಮಹಿಳೆಯೊಬ್ಬರು ಪತ್ರ ಬರೆದಿಟ್ಟು ತನ್ನ ಮಗು ಹಾಗೂ ಗಂಡನನ್ನು ಬಿಟ್ಟು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ಹಲುವಳ್ಳಿ ಗ್ರಾಮದ ಮೂಡೂರು ಎಂಬಲ್ಲಿ ನಡೆದಿದೆ.
ಮೂಡೂರು ನಿವಾಸಿ ಸಂಜೀವ ಭಂಡಾರಿ ಎಂಬವರ ಪತ್ನಿ ಪೂರ್ಣಿಮ (33) ನಾಪತ್ತೆಯಾದ ಮಹಿಳೆ ಎಂದು ತಿಳಿದುಬಂದಿದೆ.
ಇವರು ಎ.8ರಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದು, ಪತ್ರದಲ್ಲಿ ‘ಅಮ್ಮ ನನ್ನನ್ನು ಕ್ಷಮಿಸಿ ಬಿಡು, ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಆದಷ್ಟು ಬೇಗ ಮಗನನ್ನು ಕರೆದುಕೊಂಡು ಹೋಗುತ್ತೇನೆ. ಬಾಬುಗೆ ಸಮಾಧಾನ ಮಾಡು ಅಮ್ಮ’ ಎಂಬುದಾಗಿ ಬರೆಯಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಪ್ರಕರಣ ದಾಖಲಾಗಿದೆ.
Next Story