ಕೋಲ್ಚಾರು ರಸ್ತೆಯಲ್ಲಿ ವಾಹನ ಢಿಕ್ಕಿ; ಚಿರತೆಯ ಮರಿ ಸಾವು

ಸುಳ್ಯ: ನಾರ್ಕೋಡು ಕೋಲ್ಚಾರು ರಸ್ತೆ ಮಧ್ಯೆ ಏಣಾವರ ಎಂಬಲ್ಲಿ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿದೆ.
ರಾತ್ರಿ ಸಮಯದಲ್ಲಿ ಚಿರತೆ ಸಂಚಾರ ಈ ರಸ್ತೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎನ್ನಲಾಗಿದ್ದು, ಈ ರಸ್ತೆಯು ಕೇರಳ ಬಂದಡ್ಕ ಕಡೆಗೆ ಸಂಪರ್ಕಿಸುವ ಕಾರಣದಿಂದ ರಾತ್ರಿ ವೇಳೆ ವಾಹನ ಸಂಚಾರ ಅಧಿಕವಾಗಿರುತ್ತದೆ. ಇದರಿಂದಾಗಿ ಚಿರತೆ ಮರಿ ರಸ್ತೆ ದಾಟುವ ಸಂದರ್ಭ ವಾಹನದಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
Next Story





