Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಮ್ರಾನ್ ಖಾನ್ ಪದಚ್ಯುತಿ; ಸೋಮವಾರ ಹೊಸ...

ಇಮ್ರಾನ್ ಖಾನ್ ಪದಚ್ಯುತಿ; ಸೋಮವಾರ ಹೊಸ ಪಿಎಂ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ10 April 2022 7:10 AM IST
share
ಇಮ್ರಾನ್ ಖಾನ್ ಪದಚ್ಯುತಿ; ಸೋಮವಾರ ಹೊಸ ಪಿಎಂ ಆಯ್ಕೆ

ಇಸ್ಲಾಮಾಬಾದ್, ಎ.10: ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಹೈವೋಲ್ಟೆಜ್ ರಾಜಕೀಯ ಡ್ರಾಮಾ ಕೊನೆಗೂ ಅಂತ್ಯಗೊಂಡಿದೆ. ರವಿವಾರ ನಸುಕಿನಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ವಿಶ್ವಾಸಮತ ಗೊತ್ತುವಳಿಯಲ್ಲಿ ಇಮ್ರಾನ್ ಖಾನ್ ಪರಾಭವಗೊಂಡಿದ್ದಾರೆ. ಇದರೊಂದಿಗೆ ಇಮ್ರಾನ್ ಖಾನ್ ಅವರು ಸದನದಲ್ಲಿ ವಿಶ್ವಾಸಮತ ನಿರ್ಣಯದಲ್ಲಿ ಸೋಲನುಭವಿಸಿ, ಅಧಿಕಾರದಿಂದ ನಿರ್ಗಮಿಸಿದ ಪಾಕಿಸ್ತಾನದ ಮೊದಲ ಪ್ರಧಾನಿಯೆನಿಸಿಕೊಂಡಿದ್ದಾರೆ.

342 ಸದಸ್ಯ ಬಲದ ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸಮತ ನಿರ್ಣಯದ ಪರವಾಗಿ 174 ಸದಸ್ಯರು ಮತ ಚಲಾಯಿಸಿದರು. ಇಮ್ರಾನ್ ಪದಚ್ಯುತಿಗೆ ಪ್ರತಿಪಕ್ಷಗಳಿಗೆ 172 ಸದಸ್ಯರ ಬೆಂಬಲದ ಅಗತ್ಯವಿತ್ತು.

ವಿಶ್ವಾಸಮತ ನಿರ್ಣಯ ಮತದಾನಕ್ಕೆ ಮುನ್ನ ಶನಿವಾರ ಇಡೀ ದಿನದ ಪಾಕ್ ರಾಷ್ಟ್ರೀಯ ಅಸೆಂಬ್ಲಿಯು ಹಲವಾರು ರಾಜಕೀಯ ಡ್ರಾಮಾಗೆ ಸಾಕ್ಷಿಯಾಗಿತ್ತು. ದಿನವಿಡೀ ಹಲವಾರು ಸದನವನ್ನು ಮುಂದೂಡಲಾಯಿತಾದರೂ, ರವಿವಾರ ನಸುಕಿನಲ್ಲಿ ನಿರ್ಣಯವನ್ನು ಮತದಾನಕ್ಕೆ ಹಾಕಲಾಯಿತು.
ಅವಿಶ್ವಾಸ ನಿರ್ಣಯದ ಕುರಿತಾಗಿ ನಡೆದ ಮತದಾನದ ವೇಳೆ ಇಮ್ರಾನ್ ಖಾನ್ ಅವರು ಸದನದಲ್ಲಿ ಉಪಸ್ಥಿತರಿರಲಿಲ್ಲ. ಆಡಳಿತಾರೂಢ ಪಾಕ್ ತೆಹ್ರಿಕೆ ಇನ್ಸಾಪ್ (ಪಿಟಿಐ) ಪಕ್ಷದ ಸಂಸದರು ಮತದಾನದ ವೇಳೆ ಸಭಾತ್ಯಾಗ ಮಾಡಿದರು. ಆದಾಗ್ಯೂ, ಪಿಟಿಐ ಪಕ್ಷದ ಕೆಲವು ಭಿನ್ನಮತೀಯ ಸಂಸದರು ಸದನದಲ್ಲಿಉಪಸ್ಥಿತರಿದ್ದರು.

ಇಮ್ರಾನ್ ಖಾನ್ ಸರಕಾರದ ವಿರುದ್ಧ ಮಾರ್ಚ್ 8ರಂದು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು. ತನ್ನ ಸರಕಾರವನ್ನು ಪತನಗೊಳಿಸಲು ವಿದೇಶಿ ಸಂಚೊಂದು ನಡೆಯುತ್ತಿದೆಯೆಂದು ಅವರು ಅಮೆರಿಕವನ್ನು ಪರೋಕ್ಷವಾಗಿ ಪ್ರಸ್ತಾವಿಸಿ ಆರೋಪಿಸಿದ್ದರು.

 ಕಳೆದ ತಿಂಗಳು ಇಮ್ರಾನ್ ಖಾನ್ ಸರಕಾರಕ್ಕೆ ಕೆಲವು ಮಿತ್ರಪಕ್ಷಗಳು ಬೆಂಬಲವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದವು. ಅವರದೇ ಪಕ್ಷದ ಹಲವಾರು ಸಂಸದರು ಬಹಿರಂಗವಾಗಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದರು.

 ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಉಪಸ್ಪೀಕರ್ ಅವರ ಕ್ರಮವು ಅಸಂವಿಧಾನಿಕವೆಂದು ಪಾಕ್ ಸುಪ್ರೀಂಕೋರ್ಟ್ ಎಪ್ರಿಲ್ 7ರಂದು ಘೋಷಿಸಿತ್ತು. ಆನಂತರ ಇಮ್ರಾನ್ ಖಾನ್ ಅನಿವಾರ್ಯವಾಗಿ ವಿಶ್ವಾಸಮತ ಯಾಚನೆಗೆ ಮುಂದಾಗಬೇಕಾಯಿತು.

 ಶನಿವಾರ ನಾಲ್ಕು ಬಾರಿ ಸದನವನ್ನು ಮುಂದೂಡಿದ ಬಳಿಕ ಅಂತಿಮವಾಗಿ ರಾತ್ರಿ 11.45ರ ವೇಳೆಗೆ ದಿಢೀರ್ ಬೆಳವಣಿಗೆಯೊಂದರಲ್ಲಿ ಸ್ಪೀಕರ್ ಅಸಾದ್ ಖಾದಿರ್ ಅವರು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಪಿಎಂಎಲ್-ಎನ್ ಪಕ್ಷದ ಆಯಾಝ್ ಸಿದ್ದೀಕ್ ಅವರನ್ನು ಸದನದ ಹಂಗಾಮಿ ಸ್ಪೀಕರ್ ಆಗಿ ಘೋಷಿಸಿದರು. ಅಧಿಕಾರ ವಹಿಸಿಕೊಂಡ ತಕ್ಷಣವೇ ಸಿದ್ದೀಕ್ ಅವರು ಅವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕಿದ್ದರು.
 
ಈ ನಡುವೆ ಇನ್ನೊಂದು ನಾಟಕೀಯ ತಿರುವಿನಲ್ಲಿ, ಪ್ರಧಾನಿ ಇಮ್ರಾನ್ ಖಾನ್ ಅವರು ತನ್ನ ಅಧಿಕೃತ ನಿವಾಸದಲ್ಲಿ ತುರ್ತು ಸಂಪುಟ ಸಭೆಯನ್ನು ನಡೆಸಿದರು. ತನ್ನ ಸರಕಾರದ ಪತನಕ್ಕೆ ನಡೆದಿದೆಯೆನ್ನಲಾದ ಸಂಚಿನ ಕುರಿತಾದ ಪತ್ರವನ್ನು ಸ್ಪೀಕರ್, ಮೇಲ್ಮನೆಯ ಅಧ್ಯಕ್ಷ ಹಾಗೂ ಮುಖ್ಯ ನ್ಯಾಯಮೂರ್ತಿಯವರ ಜೊತೆ ಹಂಚಿಕೊಳ್ಳಲು ಅನುಮೋದನೆಯನ್ನು ಪಡೆದರು.
 ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಇಮ್ರಾನ್ ಖಾನ್ ಅವರು ವಿಶ್ವಾಸಮತ ಯಾಚನೆಯನ್ನು ನಡೆಸಬೇಕೆಂಬ ಸುಪ್ರೀಂಕೋರ್ಟ್ ನ ಆದೇಶದ ಜಾರಿಯ ಪ್ರಕ್ರಿಯೆಯಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲವೆಂದು ತಿಳಿಸಿದರು.
 ಆದಾಗ್ಯೂ ಮತದಾನದ ಪ್ರಕ್ರಿಯೆ ವಿಳಂಬಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಸಹ ನ್ಯಾಯಾಧೀಶರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದರು. ಎಪ್ರಿಲ್ 7ರಂದು ತಾನು ನೀಡಿದ ಆದೇಶದ ಯಾವುದೇ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಅವರು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದರು.

ವಿದೇಶಿ ಸಂಚಿನ ವಿರುದ್ಧದ ಸ್ವಾತಂತ್ರ್ಯ ಹೋರಾಟ ಆರಂಭಗೊಂಡಿದೆ: ಇಮ್ರಾನ್

ಅವಿಶ್ವಾಸ ಮತ ಗೊತ್ತುವಳಿಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತನ್ನ ಪದಚ್ಯುತಿ ಪ್ರಯತ್ನಗಳ ಹಿಂದೆ ವಿದೇಶಿ ಸಂಚಿದೆಯೆಂಬ ಆರೋಪವನ್ನು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ ಸ್ವಾತಂತ್ರ ಹೋರಾಟ ಇಂದಿನಿಂದಲೇ ಆರಂಭಗೊಂಡಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ ಪಕ್ಷವು ಸೋಮವಾರ ರಾಷ್ಟ್ರೀಯ ಅಸೆಂಬ್ಲಿಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.

“ಪಾಕಿಸ್ತಾನವು 1947ರಿಂದಲೇ ಸ್ವತಂತ್ರಗೊಂಡಿತು. ಆದರೆ ಸರಕಾರದ ಬದಲಾವಣೆಗಾಗಿ ನಡೆದ ವಿದೇಶಿ ಸಂಚಿನ ವಿರುದ್ಧದ ಸ್ವಾತಂತ್ರ ಹೋರಾಟವು ಇಂದಿನಿಂದ ಆರಂಭಗೊಂಡಿದೆ. ಈ ದೇಶದ ಸಾರ್ವಭೌಮತೆ ಹಾಗೂ ಪ್ರಜಾಪ್ರಭುತ್ವವನ್ನು ಸದಾ ಕಾಲ ದೇಶದ ಜನತೆಯೇ ಕಾಪಾಡಿಕೊಂಡು ಬಂದಿದ್ದಾರೆ” ಎಂದು ಖಾನ್ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಹಿರಿಯ ಪಿಟಿಐ ನಾಯಕ ಹಾಗೂ ಮಾಜಿ ಮಾಹಿತಿ ಸಚಿವ ಫಾವದ್ ಚೌಧುರಿ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಶಹಬಾಝ್ ಶರೀಫ್ ಅವರ ನಾಮ ನಿರ್ದೇಶನದ ಕುರಿತಾಗಿ ತನ್ನ ಪಕ್ಷಕ್ಕೆ ಇರುವ ಆಕ್ಷೇಪಕ್ಕೆ ಸ್ಪಂದಿಸದೆ ಇದ್ದಲ್ಲಿ, ಎಲ್ಲಾ ಪಿಟಿಐ ಸಂಸದರು ರಾಷ್ಟ್ರೀಯ ಅಸೆಂಬ್ಲಿಗೆ ನಾಳೆ ರಾಜೀನಾಮೆ ಸಲ್ಲಿಸಲಿದ್ದಾರೆಂದು ಘೋಷಿಸಿದ್ದಾರೆ.

ಸೇನೆಯೊಂದಿಗೆ ಹಳಸಿದ ಬಾಂಧವ್ಯ 

2018ರಲ್ಲಿ ‘ನಯಾ ಪಾಕಿಸ್ತಾನ’ವನ್ನು ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಇಮ್ರಾನ್ ಖಾನ್ ಅವರ ಸರಕಾರವು ವಿದೇಶಿ ವಿನಿಮಯ ಸಂಗ್ರಹದ ಕೊರತೆಯಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಇದರ ಜೊತೆಗೆ ಎರಡಂಕಿಗೆ ತಲುಪಿರುವ ಹಣದುಬ್ಬರವನ್ನು ನಿಯಂತ್ರಿಸುವ ಇಮ್ರಾನ್ ಖಾನ್ ಸರಕಾರದ ಪ್ರಯತ್ನಗಳು ಕೂಡಾ ಸಫಲವಾಗಲಿಲ್ಲ.
 
ಕಳೆದ ವರ್ಷ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ವರಿಷ್ಠ ಹುದ್ದೆಗೆ ಪಾಕ್ ಸೇನೆ ಶಿಫಾರಸು ಮಾಡಿದ ವ್ಯಕ್ತಿಯನ್ನು ಅನುಮೋದಿಸಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಇದರೊಂದಿಗೆ ಪಾಕ್ ಸೇನೆಯ ಜೊತೆಗೂ ಅವರ ಸಂಬಂಧ ಹಳಸಿತ್ತು. ಇಮ್ರಾನ್ ಖಾನ್ ಅವರು ಲೆ.ಜನರಲ್ ಫಯಾಝ್ ಅಹ್ಮದ್ ಅವರನ್ನು ಐಎಸ್ಐನ ವರಿಷ್ಠ ಸ್ಥಾನದಲ್ಲಿ ಉಳಿಸಿಕೊಳ್ಳಲು ಬಯಸಿದ್ದರು. ಆದರೆ ಪಾಕ್‌ ಸೇನೆಯ ಹೈಕಮಾಂಡ್ ಅವನ್ನು ಪೇಶಾವರದ ಕಾರ್ಪ್ಸ್ ಕಮಾಂಡರ್ ಹುದ್ದೆಗೆ ವರ್ಗಾಯಿಸಿತ್ತು.

ಶಹಬಾಝ್ ಶರೀಫ್ ಪಾಕಿಸ್ತಾನದ ಹಂಗಾಮಿ ಪ್ರಧಾನಿ? 

ಇಸ್ಲಾಮಾಬಾದ್, ಎ.10: ಇಮ್ರಾನ್ ಖಾನ್ ಅವರ ಪದಚ್ಯುತಿಯೊಂದಿಗೆ ಸದನದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಪಾಕಿಸ್ತಾನದ ಹಂಗಾಮಿ ಪ್ರಧಾನಿ ಚುನಾವಣೆಗೆ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಶಹಬಾಝ್ ಶರೀಫ್ ಅವರನ್ನು ತಮ್ಮ ಜಂಟಿ ಅಭ್ಯರ್ಥಿಯಾಗಿ ಪಾಕ್ ಪ್ರತಿಪಕ್ಷಗಳು ಕಣಕ್ಕಿಳಿಸಿವೆ. 
ಸೋಮವಾರ ಹಂಗಾಮಿ ಪ್ರಧಾನಿಯ ನೇಮಕಕ್ಕೆ ಚುನಾವಣೆ ನಡೆಯಲಿದೆ. 70 ವರ್ಷದ ಶಹಬಾಝ್ ಶರೀಫ್ ಅವರು ಮಾಜಿ ಪ್ರಧಾನಿ ನವಾಝ್ ಶರೀಫ್ ಅವರ ಕಿರಿಯ ಸೋದರ. ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿ ಅವರು 11 ವರ್ಷಗಳ ಸುದೀರ್ಘ ಅವಧಿಯವರೆಗೆ ಅಧಿಕಾರದಲ್ಲಿದ್ದರು. ನಿರ್ಗಮನ ಆಡಳಿತ ಪಕ್ಷವಾದ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ (ಪಿಟಿಐ) ಶಹಾ ಮೆಹಮೂದ್ ಖುರೈಷಿ ಅವರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಹೆಸರಿಸಿದೆ.

ಸೇಡಿನ ರಾಜಕೀಯವಿಲ್ಲ: ಶಹಬಾಝ್ ಭರವಸೆ

ಇಮ್ರಾನ್ ಖಾನ್ ಸರಕಾರದ ಪದಚ್ಯುತಿಯ ಬೆನ್ನಲ್ಲೇ ಪ್ರತಿಪಕ್ಷ ನಾಯಕ, ಪಿಎಂಎಲ್-ಎನ್ ಪಕ್ಷದ ವರಿಷ್ಠ ಶಹಬಾಝ್ ಶರೀಫ್ ಅವರು ಹೇಳಿಕೆ ನೀಡಿ, ನೂತನ ಆಡಳಿತವು ಯಾವುದೇ ರೀತಿಯ ಸೇಡಿನ ರಾಜಕೀಯವನ್ನು ಅನುಸರಿಸುವುದಿಲ್ಲವೆಂದು ಭರವಸೆ ನೀಡಿದ್ದಾರೆ.

ಅವಿಶ್ವಾಸ ನಿರ್ಣಯದ ಮತದಾನದ ಫಲಿತಾಂಶ ಪ್ರಕಟವಾದ ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಶರೀಫ್ ಅವರು ‘‘ ಹಿಂದಿನ ಕಹಿನೆನಪುಗಳೆಡೆಗೆ ಮರಳಲು ನಾನು ಬಯಸುವುದಿಲ್ಲ. ನಾವು ಅವುಗಳನ್ನು ಮರೆಯಬೇಕಾಗಿದೆ ಹಾಗೂ ಮುನ್ನಡೆಯಬೇಕಾಗಿದೆ. ನಾವು ಯಾವುದೇ ರೀತಿಯ ಸೇಡು ಅಥವಾ ಅನ್ಯಾಯದ ಕೃತ್ಯಗಳಲ್ಲಿ ತೊಡಗಲಾರೆವು. ಕಾರಣವಿಲ್ಲದೆ ಯಾವುದೇ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾರೆವು. ಕಾನೂನು ಮತ್ತು ನ್ಯಾಯ ತನ್ನ ದಾರಿಯಲ್ಲಿ ಸಾಗಲಿದೆ” ಎಂದು ಶರೀಫ್ ತಿಳಿಸಿದ್ದಾರೆ.

 ಶರೀಫ್ ಬಳಿಕ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಮಾತನಾಡಿ ದೇಶದ ಇತಿಹಾಸದಲ್ಲೇ ಪ್ರಧಾನಿಯ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಸದನಕ್ಕೆ ಅಭಿನಂದನೆ ಸಲ್ಲಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X