Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾರಿಯಿಂದ ಮಾರಿಯಮ್ಮ

ಮಾರಿಯಿಂದ ಮಾರಿಯಮ್ಮ

ಕರಾವಳಿಯಲ್ಲಿ ಸ್ಥಳೀಯ ದೇವತೆಗಳ ಬ್ರಾಹ್ಮಣೀಕರಣ: ಧಾರ್ಮಿಕ ಬಾಂಧವ್ಯಕ್ಕೆ ಬೆದರಿಕೆ

ಪ್ರಜ್ವಲ್ ಭಟ್ಪ್ರಜ್ವಲ್ ಭಟ್10 April 2022 11:05 AM IST
share
ಮಾರಿಯಿಂದ ಮಾರಿಯಮ್ಮ

 ಭಾಗ - 2

ಚಾಲ್ತಿಯಲ್ಲಿರುವ ಕಥೆಯಂತೆ ಹಡಗು ದುರಂತದಲ್ಲಿ ಬದುಕುಳಿದಿದ್ದ ಬೊಬ್ಬರ್ಯ ತನ್ನ ಅತೀಂದ್ರಿಯ ಶಕ್ತಿಗಳಿಂದ ಈಜಿ ಕಾಪುವನ್ನು ತಲುಪಿದ್ದ ಮತ್ತು ಭೂತವಾಗಿದ್ದ. ಆತನ ಗೌರವಾರ್ಥವಾಗಿ ಗುಡಿಯನ್ನು ನಿರ್ಮಿಸಿದ್ದು ಹಿಂದೂ ಬಿಲ್ಲವ ಸಮುದಾಯಕ್ಕೆ ಸೇರಿದ್ದ ಓರ್ವ ಮೂರ್ತೆದಾರ (ಶೇಂದಿ ಇಳಿಸುವವನು). ಇಲ್ಲಿ ಈಗ ಪ್ರಶ್ನೆ ಉದ್ಭವಿಸುತ್ತದೆ. ಮುಸ್ಲಿಮರು ದೈವಗಳನ್ನು ಆರಾಧಿಸುವುದಿಲ್ಲ. ಹೀಗಾಗಿ ಮುಸ್ಲಿಮ್ ಸಂಸ್ಕೃತಿಯಲ್ಲಿ ಬೊಬ್ಬರ್ಯ ದೈವವಾಗಲು ಸಾಧ್ಯವಿರಲಿಲ್ಲ. ಹಿಂದೂಗಳಲ್ಲಿ ಬೊಬ್ಬರ್ಯ ದೇವರಾಗಿದ್ದಾನೆ. ಆತನನ್ನು ಪೂಜಿಸುವಾಗ ಅವರು ಯಾವ ಶ್ಲೋಕಗಳನ್ನು ಹೇಳುತ್ತಾರೆ ಎನ್ನುವುದು ದಿಲ್ಲಿಯ ಜೆಎನ್‌ಯು ವಿವಿಯ ಮಾಜಿ ಭಾಷಾಶಾಸ್ತ್ರ ಪ್ರೊಫೆಸರ್ ಬಿಳಿಮಲೆಯವರ ಪ್ರಶ್ನೆ.

ಕನ್ನಡ ಲೇಖಕ ಹಾಗೂ ಸಾಹಿತ್ಯ ವಿಮರ್ಶಕ ಪುರುಷೋತ್ತಮ ಬಿಳಿಮಲೆ ಅವರು ಪಾಡ್ದನಗಳು ಮತ್ತು ಭೂತ ಸಂಸ್ಕೃತಿಯನ್ನು ದಾಖಲಿಸುತ್ತ ಹಲವಾರು ವರ್ಷಗಳನ್ನು ಕರಾವಳಿ ಕರ್ನಾಟಕದಲ್ಲಿ ಕಳೆದಿದ್ದಾರೆ. ಭೂತಗಳ ಪ್ರಪಂಚದ ಮೂಲಕವೇ ಮುಸ್ಲಿಮರು ಮತ್ತು ಕ್ರೈಸ್ತರು ವೈದಿಕೇತರ ಸಂಪ್ರದಾಯಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ ಎನ್ನುತ್ತಾರೆ ಅವರು.

‘‘ಮುಸ್ಲಿಮರು ದೈವಗಳನ್ನು ಆರಾಧಿಸುವುದಿಲ್ಲ ಮತ್ತು ಹಿಂದೂ ಧರ್ಮವು ತನ್ನ ದೇವತೆಯಾಗಲು ಮುಸ್ಲಿಮ್‌ಗೆ ಅವಕಾಶ ನೀಡುವುದಿಲ್ಲ. ಆದರೆ ತುಳುನಾಡಿನಲ್ಲಿ ಭೂತಾರಾಧನೆಯಿಂದಾಗಿ ಇದು ಸಾಧ್ಯವಾಗಿದೆ. ಇದೇ ಈ ಪ್ರದೇಶದ ಸೊಬಗು. ಮುಸ್ಲಿಮರು ಮತ್ತು ಕ್ರೈಸ್ತರು ಭೂತಾರಾಧನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ’’ ಎಂದು ಬಿಳಿಮಲೆ ತನ್ನ ಅಂಕಣವೊಂದರಲ್ಲಿ ಬರೆದಿದ್ದಾರೆ.

 ಅವರು ಉಲ್ಲೇಖಿಸಿರುವ ಮುಸ್ಲಿಮ್ ದೈವ ಬೊಬ್ಬರ್ಯ ಭೂತವಾಗಿದ್ದು, ಇದು ಬೊಬ್ಬ ಎಂಬ ಮುಸ್ಲಿಮ್ ನಾವಿಕನ ಹೆಸರಿನಿಂದ ಬಂದಿದೆ. ಮೀನುಗಾರ ಸಮುದಾಯದಿಂದ ಆರಾಧಿಸಲ್ಪಡುತ್ತಿರುವ ಬೊಬ್ಬ ಮುಸ್ಲಿಮ್ ತಂದೆ ಮತ್ತು ಜೈನ ತಾಯಿಯ ಮಗ.

ಚಾಲ್ತಿಯಲ್ಲಿರುವ ಕಥೆಯಂತೆ ಹಡಗು ದುರಂತದಲ್ಲಿ ಬದುಕುಳಿದಿದ್ದ ಬೊಬ್ಬರ್ಯ ತನ್ನ ಅತೀಂದ್ರಿಯ ಶಕ್ತಿಗಳಿಂದ ಈಜಿ ಕಾಪುವನ್ನು ತಲುಪಿದ್ದ ಮತ್ತು ಭೂತವಾಗಿದ್ದ. ಆತನ ಗೌರವಾರ್ಥವಾಗಿ ಗುಡಿಯನ್ನು ನಿರ್ಮಿಸಿದ್ದು ಹಿಂದೂ ಬಿಲ್ಲವ ಸಮುದಾಯಕ್ಕೆ ಸೇರಿದ್ದ ಓರ್ವ ಮೂರ್ತೆದಾರ (ಶೇಂದಿ ಇಳಿಸುವವನು). ಇಲ್ಲಿ ಈಗ ಪ್ರಶ್ನೆ ಉದ್ಭವಿಸುತ್ತದೆ. ಮುಸ್ಲಿಮರು ದೈವಗಳನ್ನು ಆರಾಧಿಸುವುದಿಲ್ಲ. ಹೀಗಾಗಿ ಮುಸ್ಲಿಮ್ ಸಂಸ್ಕೃತಿಯಲ್ಲಿ ಬೊಬ್ಬರ್ಯ ದೈವವಾಗಲು ಸಾಧ್ಯವಿರಲಿಲ್ಲ. ಹಿಂದೂಗಳಲ್ಲಿ ಬೊಬ್ಬರ್ಯ ದೇವರಾಗಿದ್ದಾನೆ. ಆತನನ್ನು ಪೂಜಿಸುವಾಗ ಅವರು ಯಾವ ಶ್ಲೋಕಗಳನ್ನು ಹೇಳುತ್ತಾರೆ ಎನ್ನುವುದು ದಿಲ್ಲಿಯ ಜೆಎನ್‌ಯು ವಿವಿಯ ಮಾಜಿ ಭಾಷಾಶಾಸ್ತ್ರ ಪ್ರೊಫೆಸರ್ ಬಿಳಿಮಲೆಯವರ ಪ್ರಶ್ನೆ. ಬೊಬ್ಬರ್ಯ ತುಳುನಾಡಿನ ಮೊಗವೀರರು, ಬಿಲ್ಲವರು ಮತ್ತು ಬ್ಯಾರಿ ಮುಸ್ಲಿಮರ ನಡುವಿನ ಭ್ರಾತೃತ್ವದ ಸಂಕೇತವಾಗಿದ್ದಾನೆ ಎನ್ನುತ್ತಾರೆ ಅವರು.         

ದೈವದಿಂದ ದೇವಿ

ಶಕ್ತಿಶಾಲಿ ಮಾರಿಯಮ್ಮ 1971ರ ಜನಗಣತಿ ವರದಿಯಲ್ಲಿ ‘ದಕ್ಷಿಣ ಭಾರತದ ಸಿಡುಬಿನ ದೇವಿ’ ಎಂದು ಬಣ್ಣಿಸಲಾಗಿರುವ ಸಾಂಕ್ರಾಮಿಕ ರೋಗಗಳ ಭೂತವಾಗಿದ್ದಾಳೆ. ಮಾರಿಯಮ್ಮನನ್ನು ಒಳಗೊಂಡಿರುವ ಹೆಚ್ಚಿನ ಸಂಪ್ರದಾಯಗಳು ಅವಳು ಭೂತ ಎಂಬ ನಂಬಿಕೆಯನ್ನು ದೃಢಪಡಿಸುತ್ತಿವೆ. ಉದಾಹರಣೆಗೆ ಮಾರಿಯಮ್ಮನ ಶಾಶ್ವತ ವಿಗ್ರಹವಿಲ್ಲ. ವಾರ್ಷಿಕ ಮಾರಿಪೂಜೆಯ ಸಂದರ್ಭದಲ್ಲಿ ತಾತ್ಕಾಲಿಕವಾದ ಕಟ್ಟಿಗೆಯ ವಿಗ್ರಹವನ್ನು ಬಳಸಲಾಗುತ್ತದೆ. ಉತ್ಸವವು ಹುಂಜಗಳು ಮತ್ತು ಕುರಿಗಳ ವಿಧಿವತ್ತಾದ ಬಲಿಯನ್ನು ಒಳಗೊಂಡಿರುತ್ತದೆ.

ಆದರೆ ದೇವಿಯನ್ನು ಒಳಗೊಂಡಿರುವ ಹೊಸ ಸಂಪ್ರದಾಯಗಳು ಅವಳನ್ನು ‘ಶಕ್ತಿ’ ಅಥವಾ ದುರ್ಗಾ ದೇವಿಯ ಅವತಾರ ಎಂದು ಮರುವ್ಯಾಖ್ಯಾನಿಸಿವೆ.

ಕಾಲಕ್ರಮೇಣ ಮಾರಿ ಮಾರಿಯಮ್ಮನಾದಳು ಮತ್ತು ಅವಳ ಗುಡಿಯು ಹಿಂದೂ ವೈದಿಕ ದೇವಸ್ಥಾನ ಎಂದು ಪರಿವರ್ತನೆಗೊಂಡಿತು. ಮಾರಿಗುಡಿಗಳಲ್ಲಿ ದುರ್ಗಾಪೂಜೆಗೆ ಸಂಬಂಧಿಸಿದ ವೈದಿಕ ವಿಧಿಗಳನ್ನು ನಡೆಸುವುದರ ಜೊತೆಗೆ ಮಾರ್ಕಂಡೇಯ ಪುರಾಣದ ಶ್ರೀ ದೇವಿ ಮಹಾತ್ಮೆಯ ಶ್ಲೋಕಗಳ ಪಠಣ ಆರಂಭಗೊಂಡಿತ್ತು. ಮಾರಿಗುಡಿ ಮತ್ತು ಕಾಪುವಿನಲ್ಲಿಯ ಜನಾರ್ದನ ದೇವಸ್ಥಾನದ ನಡುವೆ ಸಂಬಂಧವನ್ನು ಹುಟ್ಟು ಹಾಕಲಾಗಿತ್ತು ಮತ್ತು ಜನಾರ್ದನ ದೇವರನ್ನು ಮಾರಿಯ ಒಡೆಯ ಎಂದು ಕರೆಯಲಾಗುತ್ತಿತ್ತು ಎಂದು ಕುಂಡಂತಾಯ 2002ರಲ್ಲಿ ಪ್ರಕಟಗೊಂಡಿದ್ದ ತನ್ನ ‘ಕಾಪು ಕ್ಷೇತ್ರ ಪರಿಚಯ’ ಕೃತಿಯಲ್ಲಿ ಹೇಳಿದ್ದಾರೆ.

 ಸಾಂಸ್ಕೃತಿಕ ಕಲಾವಿದ ಪಿ.ಡೀಕಯ್ಯ ಹೇಳುವಂತೆ ಇದು ದೈವಗಳ ಕಥನಗಳನ್ನು ಅಳಿಸಿಹಾಕಲು ವೈದಿಕ ಸಂಪ್ರದಾಯಗಳನ್ನು ಬಳಸುತ್ತಿರುವ ನಿದರ್ಶನವಾಗಿದೆ.

ಭೂತಗಳ ಜಗತ್ತು ಮತ್ತು ವೈದಿಕ ದೇವತೆಗಳ ಜಗತ್ತು ಇವೆರಡೂ ವಿಭಿನ್ನ ಲೋಕಗಳಾಗಿವೆ. ದಶಕಗಳಿಂದಲೂ ಸಂಘ ಪರಿವಾರವು ಭೂತ ಸಂಪ್ರದಾಯಗಳ ಬ್ರಾಹ್ಮಣೀಕರಣದಲ್ಲಿ ತೊಡಗಿಕೊಂಡಿದೆ ಎನ್ನುತ್ತಾರೆ ಡೀಕಯ್ಯ.

 ಮಾರಿಯಮ್ಮನನ್ನು ಸ್ವಾಧೀನ ಪಡಿಸಿಕೊಂಡಿರುವುದು ತುಳುನಾಡಿನಲ್ಲಿಯ ಇತರ ಹಲವಾರು ದೈವಗಳ ಕಥೆಯೂ ಆಗಿದೆ ಎಂದು ಹೇಳಿದ ಡೀಕಯ್ಯ, ಸಣ್ಣ ಗುಡಿಗಳಲ್ಲಿ ಕೇಸರಿ ಧ್ವಜಗಳನ್ನು ಹಾರಿಸಲಾಗಿದೆ. ಕೋಳಿಗಳ ಬದಲು ಕುಂಬಳಕಾಯಿಗಳ ಬಲಿಯನ್ನು ಅರ್ಪಿಸುವುದು ಆರಂಭಗೊಂಡಿತು. ವೈದಿಕ ಕ್ರಮವಾದ ಬ್ರಹ್ಮ ಕಲಶವನ್ನು ಭೂತದ ಗುಡಿಗಳಿಗೂ ಪರಿಚಯಿಸಲಾಗಿದೆ ಎಂದು ಹೇಳಿದರು. ‘‘ಕೆಲವು ಭೂತಗಳ ಹೆಸರುಗಳನ್ನೂ ಬದಲಿಸಲಾಗಿದೆ. ಜುಮಾದಿ ಭೂತ ಈಗ ಧೂಮಾವತಿಯಾಗಿದ್ದರೆ ಲಕ್ಕೆಸರಿ ರಕ್ತೇಶ್ವರಿಯಾಗಿದ್ದಾಳೆ. ನಮ್ಮ ಗ್ರಾಮದಲ್ಲಿಯ ಹಿರಿಯರಿಗೆ ಧೂಮಾವತಿ ಅಥವಾ ರಕ್ತೇಶ್ವರಿ ಹೆಸರುಗಳು ಗೊತ್ತಿಲ್ಲ’’ ಎಂದು ವಿದ್ವಾಂಸೆ ಮತ್ತು ಸಾಮಾಜಿಕ ಕಾರ್ಯಕರ್ತೆ ಅಮೃತಾ ಶೆಟ್ಟಿ ಆತ್ರಾಡಿ ಹೇಳಿದರು.

ಕಾಪುವಿನಲ್ಲಿ ಮಾರಿಪೂಜಾ ಉತ್ಸವದಲ್ಲಿಯೂ ಸೂಕ್ಷ್ಮವಾದ ಬದಲಾವಣೆಗಳಾಗಿವೆ. ಮೊದಲು ಕುರಿಯನ್ನು ಬಲಿ ನೀಡುವುದರೊಂದಿಗೆ ಉತ್ಸವ ಆರಂಭಗೊಳ್ಳುತ್ತಿತ್ತು. ಈಗ ಪ್ರಾಣಿ ರಕ್ಷಣೆ ಕಾನೂನುಗಳನ್ನು ಉಲ್ಲೇಖಿಸಿ ಕುರಿಯ ಜಾಗದಲ್ಲಿ ಬೂದುಗುಂಬಳ ಬಂದಿದೆ. 1971ರ ಜನಗಣತಿ ವರದಿಯಲ್ಲಿ ಮಾರಿಪೂಜೆಗಳ ಸಂದರ್ಭದಲ್ಲಿ ಆಡು, ಕೋಳಿ ಮತ್ತು ಕೋಣಗಳನ್ನು ಬಲಿ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಕುರಿಗಳು ಮತ್ತು ಹುಂಜಗಳನ್ನು ಮಾತ್ರ ಕೊಲ್ಲಲಾಗುತ್ತಿದೆ ಎಂದು ಕಾಪು ಮಾರಿಗುಡಿಗಳ ಹಾಲಿ ಉಸ್ತುವಾರಿಗಳು ಹೇಳುತ್ತಾರೆ.

 ಮಾರಿಪೂಜೆ ಉತ್ಸವದಿಂದ ದೂರವುಳಿದ ಮುಸ್ಲಿಮರು

ಈ ವರ್ಷದ ಮಾ.22 ಮತ್ತು 23ರಂದು ನಡೆದ ಕಾಪು ಮಾರಿಪೂಜೆಯಲ್ಲಿ ಸುಮಾರು ಎರಡು ಲಕ್ಷ ಹುಂಜಗಳು ಮತ್ತು 500 ಕುರಿಗಳನ್ನು ಬಲಿ ನೀಡಲಾಗಿದೆ. ಆದರೆ ಹೆಚ್ಚಿನ ಮುಸ್ಲಿಮರು ಮೂರು ದೇವಸ್ಥಾನಗಳಲ್ಲಿ ನಡೆದಿದ್ದ ಉತ್ಸವಾಚರಣೆಗಳಿಂದ ದೂರವಿದ್ದರು.

ನಾದಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ ಅವರು ಈ ವರ್ಷದ ಉತ್ಸವದಲ್ಲಿ ಪಾಲ್ಗೊಂಡಿದ್ದ ಕೆಲವೇ ಮುಸ್ಲಿಮರಲ್ಲಿ ಒಬ್ಬರಾಗಿದ್ದರು. ಕಳೆದ ಆರು ತಲೆಮಾರುಗಳಿಂದಲೂ ಅವರ ಕುಟುಂಬವು ಪ್ರತಿ ವಾರ ಹೊಸ ಮಾರಿಗುಡಿಯಲ್ಲಿ ನಡೆಯುವ ದರ್ಶನ ಸಂದರ್ಭಗಳಲ್ಲಿ ನಾದಸ್ವರ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಅವರ ಪಾಲಿಗೆ ಮಾರಿ ಪೂಜೆಯು ಯಾವಾಗಲೂ ಇಡೀ ಪಟ್ಟಣವೇ ಭಾಗಿಯಾಗುತ್ತಿದ್ದ ಉತ್ಸವವಾಗಿತ್ತು.

‘‘ಅಪ್ಪೆಯನ್ನು ಗೌರವಿಸುವಂತೆ ನನ್ನ ಹಿರಿಯರು ಯಾವಾಗಲೂ ಹೇಳುತ್ತಿದ್ದರು, ಹೀಗಾಗಿ ನಾನು ಉತ್ಸವಕ್ಕೆ ಹೋಗಿದ್ದೆ. ಆದರೆ ಇದೇ ಮೊದಲ ಬಾರಿ ಬಹಳ ಕಡಿಮೆ ಮುಸ್ಲಿಮರು ಉತ್ಸವಕ್ಕೆ ಆಗಮಿಸಿದ್ದರು’’ ಎಂದು ಶೇಖ್ ಜಲೀಲ್ ಸಾಹೇಬ್ ಹೇಳಿದರು.

ಹಿಂದೆಲ್ಲ ಮಾರಿಪೂಜೆ ಉತ್ಸವ ಸಂದರ್ಭದಲ್ಲಿ ಶೇ.70ರಷ್ಟು ಮಳಿಗೆಗಳು ಮುಸ್ಲಿಮರದೇ ಆಗಿರುತ್ತಿದ್ದವು, ಅವರು ಮುಖ್ಯವಾಗಿ ಮಲ್ಲಿಗೆ ಹೂವು, ಬಲಿಗಾಗಿ ಹುಂಜ, ಕುರಿಗಳನ್ನು ಮಾರಾಟ ಮಾಡುತ್ತಿದ್ದರು. ಎರಡು ದಿನಗಳ ಉತ್ಸವದಲ್ಲಿ, ವಿಶೇಷವಾಗಿ ಬಲಿಪ್ರಾಣಿಗಳ ಮಾರಾಟದ ಅಂಗಡಿಗಳಲ್ಲಿ ಲಕ್ಷಗಟ್ಟಲೆ ರೂ. ವ್ಯಾಪಾರವಾಗುತ್ತದೆ. ಕಾಪುವಿನಲ್ಲಿ ಮುಸ್ಲಿಮ್ ವ್ಯಾಪಾರಿಗಳ ಮೇಲೆ ಹೇರಲಾಗಿದ್ದ ನಿಷೇಧವು ಬಳಿಕ 2022 ಮಾರ್ಚ್‌ನಲ್ಲಿ ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ ನಡೆದಿದ್ದ ಕನಿಷ್ಠ 60 ಇತರ ಉತ್ಸವಗಳಿಗೆ ವ್ಯಾಪಿಸಿತ್ತು ಎಂದು ಉಡುಪಿ ಜಿಲ್ಲಾ ಬೀದಿಬದಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಮುಹಮ್ಮದ್ ಆರಿಫ್ ತಿಳಿಸಿದರು.

‘‘ಇಲ್ಲಿ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಈ ವಾರ ನಾನು ಗ್ರಾಮದಲ್ಲಿಯ ಕಲ್ಕುಡ ಕೋಲ ಮತ್ತು ಗುಳಿಗ ಕೋಲಗಳಿಗೆ ಹೋಗಿದ್ದೆ. ಹಿಂದೆಲ್ಲ ನಾನು ಅವುಗಳನ್ನು ನೋಡಲು ತೆರಳಿದ್ದಾಗ ನಾನಲ್ಲಿ ಅನಪೇಕ್ಷಿತ ಎಂಬ ಭಾವನೆ ಎಂದಿಗೂ ನನ್ನಲ್ಲಿ ಉಂಟಾಗಿರಲಿಲ್ಲ. ಈಗ ಕಾಪುವಿನಲ್ಲಿ ನಾವು ನೋಡಿದ ಬ್ಯಾನರ್‌ಗಳು ಮತ್ತು ಇಲ್ಲಿಯ ಹಿಂದೂಗಳ ವೌನ ಎಲ್ಲವೂ ಬದಲಾಗುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ. ಇದೇ ಮೊದಲ ಬಾರಿಗೆ ನನಗೆ ಮಾರಿಪೂಜೆಗೆ ಹೋಗಬೇಕೆಂದು ಅನಿಸಿರಲಿಲ್ಲ’’ ಎಂದು ಬಹಳ ವರ್ಷಗಳಿಂದಲೂ ಕಾಪು ನಿವಾಸಿಯಾಗಿರುವ ಅನ್ವರ್ ಅಲಿ ಹೇಳಿದರು.

ಈ ವರ್ಷದ ಉತ್ಸವದ ಸಂದರ್ಭದಲ್ಲಿ ಹಿಂದುತ್ವ ಗುಂಪುಗಳು ಕಾಪುವಿನಲ್ಲಿ ಹಾಕಿದ್ದ ಬ್ಯಾನರ್‌ಗಳು ದೇವಸ್ಥಾನದ ಮಾರಿಪೂಜೆಯಲ್ಲಿ ಭಾಗವಹಿಸಲು ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡುವುದರ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದವು. ‘ಹಿಂದೂ ಈಗ ಎಚ್ಚೆತ್ತುಕೊಂಡಿದ್ದಾನೆ’ ಎಂಬ ಬರಹ ಬ್ಯಾನರ್‌ಗಳಲ್ಲಿ ರಾರಾಜಿಸುತ್ತಿತ್ತು. ಕರ್ನಾಟಕ ಸರಕಾರವು 2002ರ ಕಾನೂನೊಂದನ್ನು ತಪ್ಪಾಗಿ ಅನ್ವಯಿಸುವ ಮೂಲಕ ಇದನ್ನು ತ್ವರಿತವಾಗಿ ಅನುಮೋದಿಸಿತ್ತು.

ಆದರೆ ಗ್ರಾಮದ ಸಮನ್ವಯ ಇತಿಹಾಸದ ಬಗ್ಗೆ ಕಟ್ಟಕ್ಕರೆಯಿಂದ ಮಾತನಾಡುವ ಕಾಪು ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಿಂದುತ್ವ ಗುಂಪುಗಳಿಂದ ತಾವು ಎದುರಿಸಿದ ಒತ್ತಡದ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ‘‘ಮುಸ್ಲಿಮ್ ವ್ಯಾಪಾರಿಗಳನ್ನು ಹೊರಗಿಡುವ ನಮ್ಮ ನಿರ್ಧಾರವು ಇಲ್ಲಿ ಶಾಂತಿಯನ್ನು ಕಾಪಾಡುವ ಉದ್ದೇಶದ್ದಾಗಿತ್ತು. ಇದರಿಂದಾಗಿ ಯಾರಿಗೂ ತೊಂದರೆಯಾಗುವುದನ್ನು ನಾವು ಬಯಸುವುದಿಲ್ಲ’’ ಎಂದು ಹೆಸರು ಹೇಳಿಕೊಳ್ಳಲು ಬಯಸದ ಸಮಿತಿಯ ಸದಸ್ಯರೋರ್ವರು ಹೇಳಿದರು.

ಅವರ ಅಭಿಪ್ರಾಯ ಪ್ರದೇಶದ ಪ್ರಭಾವಿ ಬಿಜೆಪಿ ನಾಯಕರೋರ್ವರ ಮಾತುಗಳಲ್ಲಿಯೂ ಪ್ರತಿಧ್ವನಿಸಿದೆ. ‘‘ಇಲ್ಲಿ ಇಂತಹ ಸ್ಥಿತಿ ಎಂದಿಗೂ ಬರಕೂಡದಿತ್ತು. ಕಾಪುವಿನ ಸೌಹಾರ್ದವನ್ನು ತಲೆಮಾರುಗಳಿಂದಲೂ ರಕ್ಷಿಸಿಕೊಂಡು ಬರಲಾಗಿದೆ. ನಾವು ಇಲ್ಲಿ ದ್ವೇಷವನ್ನು ಹೊಂದಲು ಸಾಧ್ಯವಿಲ್ಲ’’ ಎಂದು ಅನಾಮಿಕರಾಗಿರಲು ಬಯಸಿದ ಅವರು ಹೇಳಿದರು.

ಭವಿಷ್ಯದಲ್ಲಿ ವಾರ್ಷಿಕ ಉತ್ಸವವು ಮತ್ತೆ ಮುಸ್ಲಿಮ್ ವ್ಯಾಪಾರಿಗಳನ್ನು ಒಳಗೊಂಡಿರಲಿದೆ ಎಂಬ ಆಶಯವನ್ನು ಅವರಿಬ್ಬರೂ ವ್ಯಕ್ತಪಡಿಸಿದರು.

ಕೃಪೆ: thenewsminute.com

share
ಪ್ರಜ್ವಲ್ ಭಟ್
ಪ್ರಜ್ವಲ್ ಭಟ್
Next Story
X