ಬುಡೋಳಿಯಲ್ಲಿ ಕಾರುಗಳ ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು, ನಾಲ್ವರಿಗೆ ಗಾಯ

ಬಂಟ್ವಾಳ, ಎ.10: ಎರಡು ಕಾರುಗಳು ಮಧ್ಯೆ ಮುಖಾಮುಖಿ ಢಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಮಾಣಿ ಸಮೀಪ ಬುಡೋಳಿಯಲ್ಲಿ ರವಿವಾರ ಮುಂಜಾನೆ ನಡೆದಿದೆ.
ಮೃತರನ್ನು ಬೆಂಗಳೂರು ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿ ಲಕ್ಷ್ಮಣ ಆಚಾರಿ (65) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಪ್ರಜ್ವಲ್ (22), ನಾರಾಯಣ, ಮಂಜುನಾಥ ಹಾಗೂ ರಘುಚಂದ್ರ ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ಷ್ಮಣ ಆಚಾರಿ ತನ್ನ ಪುತ್ರಿಯ ವಿವಾಹ ಆಮಂತ್ರಣ ನೀಡುವುದಕ್ಕಾಗಿ ಬೆಂಗಳೂರಿನಿಂದ ಊರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ. ಕಾರನ್ನು ಪ್ರಜ್ವಲ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





