ಬೆಂಗಳೂರಿನಲ್ಲಿ ಪಾಮ್ ಸಂಡೇ ಆಚರಣೆ

ಬೆಂಗಳೂರು, ಎ. 10: ಏಸುಕ್ರಿಸ್ತರು ಅನುಭವಿಸಿದ ಸಂಕಷ್ಟಗಳ ನೆನಪಿನಲ್ಲಿ ಆಚರಿಸಲಾಗುವ ಗರಿಗಳ ರವಿವಾರ (ಪಾಮ್ ಸಂಡೆ) ಅನ್ನು ರಾಜಧಾನಿ ಬೆಂಗಳೂರಿನ ಎಲ್ಲೆಡೆ ಕ್ರೈಸ್ತ ಸಮುದಾಯದವರು ಶ್ರದ್ಧೆ ಭಕ್ತಿಯಿಂದ ಆಚರಣೆ ಮಾಡಿದರು.
ರವಿವಾರ ತಿಲಕನಗರ ಈಟನ್ ಮೆಮೋರಿಯಲ್ ಚರ್ಚ್ ಫಾದರ್ ವಿಲ್ಸನ್ ದಾಸ್, ಚಾಮರಾಜಪೇಟೆಯ ಸನ್‍ಲೂಕ್ಸ್ ಚರ್ಚಿನ ಫಾದರ್ ಸತೀಶ್ ನೇತೃತ್ವದಲ್ಲಿ ಹಲವು ಕಡೆಗಳಲ್ಲಿ ಪಾಮ್ ಸಂಡೇ ಆಚರಣೆ ಜರುಗಿತು.
ಬರೋಬ್ಬರಿ ಎರಡು ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತರು ಜರುಸಲೇಂ ನಗರ ಪ್ರವೇಶಿಸಿದಾಗ ಅಲ್ಲಿನ ಜನರು ಅದ್ದೂರಿಯಾಗಿ ಸ್ವಾಗತ ಕೋರಿದ ಮತ್ತು ಅಂದಿನಿಂದ ಮರಣದ ತನಕ ಅವರು ಅನುಭವಿಸಿದ ಸಂಕಷ್ಟಗಳ ನೆನಪಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಇನ್ಣೂ, ಚರ್ಚ್‍ಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಏಸು ಕ್ರಿಸ್ತರಿಗೆ ಘೋಷಣೆ ಹಾಕಿ ಶ್ರದ್ಧಾ ಭಕ್ತಿಯಿಂದ ಬಲಿ ಪೂಜೆ ಅರ್ಪಿಸಿದರು.
Next Story





