ಮೂಡ್ಲಕಟ್ಟೆ: ‘ಐ.ಎಂ.ಜಯರಾಮ್ ಶೆಟ್ಟಿ ಸರ್ಕಲ್’ ಲೋಕಾರ್ಪಣೆ

ಕುಂದಾಪುರ, ಎ.10: ಮಾಜಿ ಶಾಸಕ, ಮಾಜಿ ಸಂಸದ ಹಾಗೂ ಐಎಂಜೆ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿವಂಗತ ಐ.ಎಂ.ಜಯರಾಮ್ ಶೆಟ್ಟಿ ಸ್ಮರಣಾರ್ಥವಾಗಿ ಮೂಡ್ಲಕಟ್ಟೆಯ ಕುಂದಾಪುರ ರೈಲು ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಿಸಲಾದ ‘ಐ.ಎಂ ಜಯರಾಮ್ ಶೆಟ್ಟಿ ಸರ್ಕಲ್’ ರವಿವಾರ ಲೋಕಾರ್ಪಣೆಗೊಂಡಿತು
ಸರ್ಕಲ್‌ನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಉದ್ಘಾಟಿಸಿದರು. ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಶುಭಕೋರಿದರು
ಮುಖ್ಯ ಅತಿಥಿಗಳಾಗಿ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಾಬಿ, ಗ್ರಾಪಂ ಸದಸ್ಯ ಅಭಿಜಿತ್ ಕೊಠಾರಿ, ಯಶಪಾಲ್ ಸುವರ್ಣ, ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಐ.ಎಂ ಜಯರಾಮ್ ಶೆಟ್ಟಿ ಕುಟುಂಬಿಕರಾದ ವಿದ್ಯಾ ಜಯರಾಮ್ ಶೆಟ್ಟಿ, ರತನ್ ಜೆ.ಶೆಟ್ಟಿ, ಸಿದ್ದಾರ್ಥ್ ಜೆ.ಶೆಟ್ಟಿ, ವತ್ಸಲಾ ಸುಧಾಕರ್ ಹೆಗ್ಡೆ, ರಮಾ ಬಾಲಕೃಷ್ಣ ಶೆಟ್ಟಿ, ಐ.ಎಂ.ರಾಜರಾಮ್ ಶೆಟ್ಟಿ ಉಪಸ್ಥಿತರಿದ್ದರು.ಎಂಎನ್‌ಬಿಎಸ್ ಟ್ರಸ್ಟಿನ ವಿದ್ಯಾ ಜೆ.ಶೆಟ್ಟಿ ಸ್ವಾಗತಿಸಿದರು. ಎಂಐಟಿ ಕಾಲೇಜಿನ ಗ್ರಂಥಪಾಲಕ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಸಿದ್ದಾರ್ಥ್ ಜೆ. ಶೆಟ್ಟಿ ವಂದಿಸಿದರು.





