ಮುಸ್ಲಿಮ್ ವ್ಯಾಪಾರಿಗಳ ಅಂಗಡಿ ನಾಶಕ್ಕೆ ಯುನಿವೆಫ್ ಕರ್ನಾಟಕ ಖಂಡನೆ
ಮಂಗಳೂರು,ಎ.10: ಧಾರವಾಡ ಜಿಲ್ಲೆಯ ದೇವಾಲಯವೊಂದರ ಆವರಣದಲ್ಲಿದ್ದ ಮುಸ್ಲಿಮ್ ವ್ಯಾಪಾರಿಗಳಿಗೆ ಸೇರಿದ ಅಂಗಡಿಗಳಿಗೆ ಕೇಸರಿ ಶಾಲುಗಳನ್ನು ಹಾಕಿದ್ದ ಶ್ರೀರಾಮಸೇನೆಯ ಕಾರ್ಯಕರ್ತರು ನುಗ್ಗಿ ದಾಂಧಲೆಗೈದ ಕೃತ್ಯವನ್ನು ಯುನಿವೆಫ್ ಕರ್ನಾಟಕ ಖಂಡಿಸಿದೆ.
ದುಷ್ಕರ್ಮಿಗಳು ಕಲ್ಲಂಗಡಿ ಹೊರಗೆಸೆದು ಧ್ವಂಸಗೊಳಿಸಿರುವ ಘಟನೆ ನಾಚಿಗೆಕೇಡು. ಇದು ಅಕ್ಷಮ್ಯ ಹಾಗು ಅಮಾನವೀಯವಾಗಿದೆ. ಇತ್ತೀಚಿನ ಘಟನೆಗಳನ್ನು ಗಮನಿಸುವಾಗ ಇದು ಕರ್ನಾಟಕವೋ ಅಥವಾ ಕಾಶ್ಮೀರವೋ ಎಂಬ ಅನುಮಾನ ಕಾಡುವಂತಾಗಿದೆ. ಕೃತ್ಯದ ಬಗ್ಗೆ ಸರಕಾರ ಮೌನ ವಹಿಸಿರುವುದು ಮತ್ತು ಕ್ರಿಯಗೆ ಪ್ರತಿಕ್ರಿಯೆ ಎಂಬ ರಾಜಕಾರಣಿಗಳ ಹೇಳಿಕೆಗಳೇ ಇವರಿಗೆ ಪ್ರೇರಣೆಯಾಗಿದೆ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
Next Story





