ಪ್ರಾಚೀನ ಕಾವ್ಯವನ್ನು ಆಧುನಿಕ ಕಾಲಕ್ಕೆ ಕೊಡುವ ಪ್ರಯತ್ನದ ಫಲ ‘ಚಾರುವಸಂತ’: ಹಂಪ ನಾಗರಾಜಯ್ಯ
ಬೆಂಗಳೂರು, ಎ.10: ‘ಚಾರುವಸಂತ ಕೃತಿಯು ರಾಮಾಯಣ, ಮಹಾಭಾರತದಷ್ಟೇ ಪ್ರಾಚೀನವಾದ ಮತ್ತು ಶ್ರೇಷ್ಠ ಕೃತಿಯ ಮೂಲದಿಂದ ಮೂಡಿದ ಮಹಾಕಾವ್ಯವಾಗಿದೆ. ಪ್ರಾಚೀನ ಕಾವ್ಯವನ್ನು ಆಧುನಿಕ ಕಾಲಕ್ಕೆ ಕೊಡುವ ಪ್ರಯತ್ನದ ಫಲವಾಗಿ ಈ ಚಾರುವಸಂತ ಕೃತಿಯನ್ನು ಬರೆಯಲಾಗಿದೆ' ಎಂದು ನಾಡೋಜ ಹಂಪ ನಾಗರಾಜಯ್ಯ ತಿಳಿಸಿದ್ದಾರೆ.
ರವಿವಾರ ನಗರದ ವಿಮಾನಪುರದ ಕೈರಳಿ ನಿಲಯಂ ಸ್ಕೂಲಿನ ಆವರಣದಲ್ಲಿ ನಡೆದ ‘ಚಾರುವಸಂತ’ ಮಲಯಾಳಂ ಭಾಷೆಯ ಅನುವಾದಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನಗೆ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನದಲ್ಲಿ ಆಸಕ್ತಿ ಇತ್ತು. 2003ರಲ್ಲಿ ‘ಚಾರುವಸಂತ’ ಎಂಬ ಕನ್ನಡ ಕಾವ್ಯ ಬರೆದ ನಂತರ ನನ್ನೊಳಗೆ ಒಬ್ಬ ಕವಿ ಮೂಡಿದನು ಎಂದರು.
ಚಾರುವಸಂತ ಬಹಳ ಪ್ರಾಚೀನ ಕತೆ, ಗುಣಾಡ್ಯನ ಬೃಹತ್ ಕತೆ ಸಂಸ್ಕøತದಲ್ಲಿ ಕ್ರಿ.ಪೂ.2ನೆ ಶತಮಾನದಲ್ಲಿ ರಚನೆಯಾದರೆ ಮುಂದೆ ಹಲವು ಭಾμÉಗಳಲ್ಲಿ ಈ ಕತೆ ಬೆಳೆಯುತ್ತಾ ಹೋಯಿತು. ಇದೇ ಕತೆಯನ್ನು ಮೂಲವಾಗಿರಿಸಿ ಚಾರುವಸಂತ ಮಹಾಕಾವ್ಯ ರಚನೆಯಾಗಿದೆ. ಪ್ರಾಚೀನ ಕೃತಿಗಳನ್ನು ಆಧುನಿಕ ಕಾಲಕ್ಕೆ ಕೊಡಬೇಕೆನ್ನುವ ಆಶಯದೊಂದಿಗೆ ರಚನೆಯಾದ ಕಾವ್ಯ ಇದಾಗಿದೆ. ಈ ಮಹಾಕಾವ್ಯ ಹದಿನೈದು ಭಾಷೆಗಳಿಗೆ ಅನುವಾದಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಮಲಯಾಳಂ ಲೇಖಕ ಮತ್ತು ಅನುವಾದಕ ಪಯ್ಯನೂರು ಕುಂಜಿರಾಮನ್ ಅವರು ಮಲೆಯಾಳಂಗೆ ಅನುವಾದಿಸಿರುವ ಕೃತಿ ಬಿಡುಗಡೆಯಾಗುತ್ತಿದೆ. ಇದು ಬಹಳ ಸಂಭ್ರಮದ ವಿಚಾರವಾಗಿದೆ ಎಂದು ಸಂತಸ ಹಂಚಿಕೊಂಡ ಅವರು, ಮಲಯಾಳಂ ಸಾಹಿತ್ಯ ಮತ್ತು ಸಾಹಿತಿಗಳೊಂದಿಗೆ ತಮ್ಮ ಒಡನಾಟವನ್ನು ನೆನೆಪಿಸಿಕೊಂಡರು.
ಯು.ಆರ್.ಅನಂತಮೂರ್ತಿ, ಕೃಷ್ಣ ಆಲನಹಳ್ಳಿ, ನಿರಂಜನ ಸೇರಿದಂತೆ ಹಲವು ಶ್ರೇಷ್ಠ ಲೇಖಕರ ಕೃತಿಯನ್ನು ಮಲಯಾಳಂಗೆ ಅನುವಾದಿಸಿ ಪ್ರಕಟಿಸಿರುವ ಮಾತೃಭೂಮಿ ಸಂಸ್ಥೆ ಈ ಕೃತಿಯನ್ನು ಪ್ರಕಟಿಸಿದೆ. ಕಾರ್ಯಕ್ರಮದಲ್ಲಿ ಮಾತೃಭೂಮಿ ಸಂಸ್ಥೆಯ ನಿರ್ದೇಶಕ ವಿಜಯಪದ್ಮನ್, ಅನುವಾದಕ ಪಯ್ಯನೂರು ಕುಂಜಿರಾಮನ್, ಮೋಹನ ಕುಂಟಾರ್, ನಾಡೋಜ ಕಮಲಾ ಹಂಪನ, ಸುಧೀಶ್ ಪಿ.ಕೆ., ಸುಧಾಕರನ್ ರಾಮಂಥಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.







