ತಾಜುಲ್ ಉಲಮಾ ರಿಲೀಫ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ದ.ಕ ವತಿಯಿಂದ ರಮಝಾನ್ ಕಿಟ್ ವಿತರಣೆ

ಬಂಟ್ವಾಳ : ತಾಜುಲ್ ಉಲಮಾ ರಿಲೀಫ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ದಕ್ಷಿಣ ಕನ್ನಡ ಇದರ ವತಿಯಿಂದ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ, ಆರ್ಥಿಕವಾಗಿ ಹಿಂದುಳಿದ ಸುಮಾರು 50 ಮೊಹಲ್ಲಾಗಳಿಗೆ ಒಳಪಟ್ಟ 500 ಕುಟುಂಬಗಳಿಗೆ, ದ್ವಿತೀಯ ವರ್ಷದ ರಝಾನ್ ಕಿಟ್ ವಿತರಣಾ ಕಾರ್ಯಕ್ರಮ ಕಕ್ಕೆಪದವು ಸಮೀಪದ ಕುಲಾಲ್ ಬದ್ರಿಯಾ ಮದ್ರಸದಲ್ಲಿ ನಡೆಯಿತು.
ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಇಮಾಮ್ ಮಶೂದ್ ಸಅದಿ ಉದ್ಘಾಟಿಸಿದರು.
ಅಬ್ದುಲ್ ಹಕೀಮ್ ಮದನಿ ಪಾಂಡವರಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಗ್ಗ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಪುಂಜಾಲಕಟ್ಟೆ, ನಿರ್ದೇಶಕರಾದ ಅಬ್ದುಲ್ ಹಮೀದ್ ಉಡುಪಿ, ಜುನೈದ್ ರಝಾ ಅಝ್ಹರಿ ಸಾಮಾಜಿಕ ಕಾರ್ಯಕರ್ತರಾದ ಇಲ್ಯಾಸ್ ಕುಲಾಲ್ ಹಾಗೂ ಹಸೈನಾ ಅಜಿಲಮೊಗುರು ಮುಂತಾದವರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ರಾಝಿಕ್ ಬಿ.ಎಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Next Story