ಮಲ್ಪೆ ಬಂದರಿನ ಧಕ್ಕೆಯಲ್ಲಿ ಮೃತದೇಹ ಪತ್ತೆ
ಮಲ್ಪೆ : ಮಲ್ಪೆ ಬಂದರಿನ ಮಂಜುಧಕ್ಕೆಯ ನೀರಿನಲ್ಲಿ 50ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಎ.10ರಂದು ಪತ್ತೆಯಾಗಿದೆ.
ಮೃತರು ಹಸಿರು ಬಣ್ಣದ ಅಂಗಿ ಹಾಗೂ ನೀಲಿ ಬಿಳಿ ಕೇಸರಿ ಬಣ್ಣದ ಗೆರೆಗಳಿರುವ ಪಂಚೆ ಧರಿಸಿದ್ದಾರೆ. ಮೃತ ದೇಹವನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಮೃತರು ಸುಮಾರು ಒಂದು ದಿನದ ಹಿಂದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story