ಹನೂರು: ತಾಯಿಯ ಅಗಲಿಕೆಯ ನೋವಿನ ನಡುವೆಯೂ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ
ಹನೂರು: ತಾಯಿಯ ಅಗಲಿಕೆಯ ನಡುವೆಯೂ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾದ ಪ್ರಸಂಗ ಹನೂರು ಪಟ್ಟಣದಲ್ಲಿ ನಡೆದಿದೆ.
ಹನೂರು ಪಟ್ಟಣದ ಮಾರಿಗುಡಿ ಬೀದಿಯ ವಿದ್ಯಾರ್ಥಿ ಸಂಜಯ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಾಗಿದ್ದಾನೆ. ಸಂಜಯ್ರ ತಾಯಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಮುಂಜಾನೆ ಅಸುನೀಗಿದ್ದಾರೆ. ಆದರೆ ಮೃತರ ಪುತ್ರ ಸಂಜಯ್ಗೆ ಇಂದು ಎಸೆಸೆಲ್ಸಿಯ ಅಂತಿಮ ವಿಷಯವಾದ ವಿಜ್ಞಾನ ಪರೀಕ್ಷೆಯಿತ್ತು. ತಾಯಿಯ ಅಗಲಿಕೆಯ ನಡುವೆಯೂ ಸಂಜಯ್ ಕ್ರಿಸ್ತರಾಜ ವಿದ್ಯಾಸಂಸ್ಥೆಯ ಕೇಂದ್ರಕ್ಕೆ ಬಂದು ಪರೀಕ್ಷೆಗೆ ಬರೆದಿದ್ದಾನೆ.
ಪರೀಕ್ಷೆ ಬಳಿಕ ವಿದ್ಯಾರ್ಥಿ ಸಂಜಯ್ ಆಗಮಿಸಿ ತಾಯಿಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದನು. ಈ ಘಟನೆಯಿಂದ ಹನೂರು ಪಟ್ಟಣವಾಸಿಗಳನ್ನು ಕಂಬನಿ ಮಿಡಿಯುವಂತೆ ಮಾಡಿತ್ತು.
Next Story