ಶ್ರೀರಾಮ ಸೇನೆಯ ಗೂಂಡಾಗಿರಿಗೆ ಸಿಪಿಎಂ ಖಂಡನೆ
ಮಂಗಳೂರು : ದಾರಾವಾಡ ಜಿಲ್ಲೆಯ ನುಗ್ಗೇಕೇರಿಯಲ್ಲಿ ಕಳೆದ ಎರಡು ದಶಕಗಳಿಂದ ಹಣ್ಣು ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿರುವುದಲ್ಲದೆ ಮಾರಾಟಕ್ಕಾಗಿ ಅವರು ಸಂಗ್ರಹಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆ ಎಸೆದು ನಾಶಪಡಿಸಿದ ಶ್ರೀರಾಮಸೇನೆಯ ಗೂಂಡಾಗಿರಿಗೆ ದ.ಕ.ಜಿಲ್ಲಾ ಸಿಪಿಎಂ ಖಂಡಿಸಿದೆ.
ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿಕೆಯೊಂದನ್ನು ನೀಡಿ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಗೂಂಡಾಗಿರಿ ನಡೆಸಿದವರು ಮತ್ತವರಿಗೆ ಬೆಂಬಲ ನೀಡಿದವರ ಮೇಲೆ ಕಾನುನು ಕ್ರಮ ಜರಗಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
Next Story