ಸರಣಿ ಅಪಘಾತ ಎಸಗಿದ ಕಾರು ಚಾಲಕನ ತೀವ್ರ ವಿಚಾರಣೆ : ಮಂಗಳೂರು ಕಮಿಷನರ್

ಮಂಗಳೂರು : ನಗರದ ಬಲ್ಲಾಳ್ ಬಾಗ್‌ನಲ್ಲಿ ಶನಿವಾರ ಸರಣಿ ಅಪಘಾತಕ್ಕೆ ಕಾರಣನಾದ ಬಿಎಂಡಬ್ಲ್ಯು ಕಾರಿನ ಚಾಲಕ ಶ್ರವಣ್ ಕುಮಾರ್‌ನ ವಿಚಾರಣೆ ಮುಂದುವರಿಸಲಾಗಿದ್ದು, ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ ಮದ್ಯ ಅಥವಾ ಡ್ರಗ್ಸ್ ಸೇವಿಸಿರುವ ಬಗ್ಗೆ ಪರೀಕ್ಷೆಗೆ ರಕ್ತ ಮತ್ತು ಇತರ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಇನ್ನಷ್ಟೇ ಕೈ ಸೇರಬೇಕಿದೆ. ಆತ ಈ ಹಿಂದೆ ಕೆಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವ ಮಾಹಿತಿ ಇದ್ದು ಆ ಕಾರ್ಯಕ್ರಮಗಳಲ್ಲಿ ಯಾವುದಾದರೂ ಅಪರಾಧ ಪ್ರಕರಣಗಳು ನಡೆದಿವೆಯೇ ಎಂಬ ಕುರಿತು ಕೂಡ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Next Story





