ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಬಿಡುಗಡೆ
ಮಂಗಳೂರು : ದ.ಕ.ಜಿಲ್ಲೆಯ ಪಡಿತರ ಚೀಟಿದಾರರಿಗೆ 2022ರ ಎಪ್ರಿಲ್ ತಿಂಗಳ ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಹಾಗೂ ಪಿಎಂಜಿಕೆವೈ ಅಡಿಯಲ್ಲಿ ಪ್ರತೀ ಸದಸ್ಯನಿಗೆ 5 ಕೆ.ಜಿ ಅಕ್ಕಿ ಬಿಡುಗಡೆಯಾಗಿದೆ. ಬಿಪಿಎಲ್ ಪಡಿತರ ಚೀಟಿಗಳಿಗೆ ಪ್ರತೀ ಸದಸ್ಯನಿಗೆ 6 ಕೆ.ಜಿ. ಅಕ್ಕಿ ಬಿಡುಗಡೆಯಾಗಿದೆ.
ಎಪಿಎಲ್ ಪಡಿತರ ಚೀಟಿಗಳಿಗೆ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ ಬಹು ಸದಸ್ಯ ಸದಸ್ಯ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತೀ ಕೆ.ಜಿ.ಗೆ 15 ರೂ.ಗಳ ದರದಲ್ಲಿ ವಿತರಿಸಲಾಗುವುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story