ಬಿಜೆಪಿಯವರು ಹಿಂದೂ ಧರ್ಮದ ಪಾಲಕರಲ್ಲ, ಲೂಟಿಧರ್ಮದ ಪಾಲಕರು: ಎಚ್.ಸಿ ಮಹದೇವಪ್ಪ ವಾಗ್ದಾಳಿ

ಬೆಂಗಳೂರು: 'ರಾಜ್ಯ ಸರ್ಕಾರದ ಶೇ.40 ಭ್ರಷ್ಟಾಚಾರಕ್ಕೆ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಈ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ' ಹಿಂದುತ್ವ ಹಿಂದುತ್ವ ಎನ್ನುತ್ತಾ ಜನರಿಂದ 40% ಕಮಿಷನ್ ವಸೂಲಿ ಮಾಡುತ್ತಿರುವ ಬಿಜೆಪಿ ಪಕ್ಷದವರು ಹಿಂದೂ ಧರ್ಮದ ಪಾಲಕರಲ್ಲ, ಲೂಟಿಧರ್ಮದ ಪಾಲಕರು' ಎಂದು ಕಿಡಿಗಾರಿದ್ದಾರೆ.
''ಇನ್ನು ಸಂತೋಷ್ ಅವರ ಆತ್ಮಹತ್ಯೆಗೆ ನೇರ ಕಾರಣವಾಗಿರುವ ಸಚಿವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ, ಸರ್ಕಾರ ಕೂಡಲೇ ಅವರ ವಿರುದ್ಧ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ' ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ 40% ಭ್ರಷ್ಟಾಚಾರಕ್ಕೆ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಈ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ.
— Dr H.C.Mahadevappa (@CMahadevappa) April 12, 2022
ಹಿಂದುತ್ವ ಹಿಂದುತ್ವ ಎನ್ನುತ್ತಾ ಜನರಿಂದ 40% ಕಮಿಷನ್ ವಸೂಲಿ ಮಾಡುತ್ತಿರುವ @BJP4Karnataka ಪಕ್ಷದವರು ಹಿಂದೂ ಧರ್ಮದ ಪಾಲಕರಲ್ಲ, ಲೂಟಿಧರ್ಮದ ಪಾಲಕರು.
1/2 pic.twitter.com/4M4eOVqxZA







