ಎಸೆಸೆಲ್ಸಿ ಉತ್ತರಪತ್ರಿಕೆ ಮೌಲ್ಯಮಾಪನ ಸಂಭಾವನೆ ಹೆಚ್ಚಿಸಿದ ಸರಕಾರ

ಬೆಂಗಳೂರು, ಎ.13: ಪ್ರಸಕ್ತ(2022ನೇ) ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆ ಮೌಲ್ಯಮಾಪನ ಸಂಭಾವನೆಯನ್ನು ಸರಕಾರ ಹೆಚ್ಚಿಸಿದೆ.
ಮೌಲ್ಯಮಾಪನ ಸಂಭಾವನೆ ದರ ಹೆಚ್ಚಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.
ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಪರೀಕ್ಷಕರ ಪರಿಷ್ಕೃತ ಸಂಭಾವನೆ 7,270 ರೂ. (ಹಿಂದಿನ ದರ 6,924 ರೂ.) ಆಗಿದ್ದರೆ, ಉಪ ಮುಖ್ಯ ಪರೀಕ್ಷಕರ ಪರಿಷ್ಕೃತ ಸಂಭಾವನೆ 5,204 ರೂ. (ಹಿಂದಿನ ದರ 5,464 ರೂ.)ಗೆ ಏರಿಕೆ ಮಾಡಲಾಗಿದೆ.
ಪ್ರಥಮ ಭಾಷೆಯ ಪ್ರತೀ ಉತ್ತರ ಪತ್ರಿಕೆಗೆ 23 ರೂ. (ಹಿಂದಿನ ದರ 22), ದ್ವಿತೀಯ/ತೃತೀಯ ಭಾಷೆ ಪ್ರತೀ ಉತ್ತರ ಪತ್ರಿಕೆಗೆ 21 ರೂ. (ಹಿಂದಿನ ದರ 20), ಐಚ್ಛಿಕ ವಿಷಯಗಳ ಪ್ರತೀ ಉತ್ತರ ಪತ್ರಿಕೆಗೆ 21 ರೂ. (ಹಿಂದಿನ ದರ 20) ದರ ನಿಗದಿ ಮಾಡಲಾಗಿದ್ದು, ತಲಾ 1 ರೂ. ಹೆಚ್ಚಳ ಮಾಡಲಾಗಿದೆ.
ಭತ್ತೆಯಲ್ಲೂ ಹೆಚ್ಚಳ ಮಾಡಲಾಗಿದೆ:
* ದಿನಭತ್ತೆ(ಬೆಂಗಳೂರು) ಪರಿಷ್ಕೃತ ದರ-596 ರೂ. (ಹಿಂದಿನ ದರ- 568)
* ದಿನಭತ್ತೆ(ಇತರ ಸ್ಥಳಗಳು): ಪರಿಷ್ಕೃತ ದರ-469 ರೂ. (ಹಿಂದಿನ ದರ- 447 ರೂ.)
* ಸ್ಥಳೀಯ ಭತ್ತೆ(ಬೆಂಗಳೂರು): ಪರಿಷ್ಕೃತ ದರ-234 ರೂ. (ಹಿಂದಿನ ದರ- 223 ರೂ.)
* ಸ್ಥಳೀಯ ಭತ್ತೆ(ಇತರ ಸ್ಥಳಗಳು): ಪರಿಷ್ಕೃತ ದರ-189 ರೂ. (ಹಿಂದಿನ ದರ- 180 ರೂ.)
* ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ: ಪರಿಷ್ಕೃತ ದರ-4,515 ರೂ. (ಹಿಂದಿನ ದರ- 4,300 ರೂ.)
* ಕ್ಯಾಂಪ್ ಸಹಾಯಕರು: ಪರಿಷ್ಕೃತ ದರ-1,260 ರೂ. (ಹಿಂದಿನ ದರ- 1,200 ರೂ.)
* ಡಿ ದರ್ಜೆ ಸಿಬ್ಬಂದಿ: ಪರಿಷ್ಕೃತ ದರ-630 ರೂ. (ಹಿಂದಿನ ದರ- 600 ರೂ.)







