ದ.ಕ. ಜಿಲ್ಲೆ: ಗೃಹರಕ್ಷಕದಳದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಜಯಾನಂದ - ಮಾರ್ಕ್ ಶೇರಾ
ಮಂಗಳೂರು : ಗೃಹರಕ್ಷಕ ದಳದ ಬೆಳ್ತಂಗಡಿ ಘಟಕದ ಪ್ರಭಾರ ಅಧಿಕಾರಿ ಜಯಾನಂದ ಮತ್ತು ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ ಅವರಿಗೆ 2021ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ.
೧೯೮೯ರ ನ.೧ರಂದು ಇಲಾಖೆಗೆ ಸೇರಿದ್ದ ಜಯಾನಂದ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ೧೯೯೯ರ ಮಾ.೧ರಂದು ಇಲಾಖೆಗೆ ಸೇರಿದ್ದ ಮಾರ್ಕ್ ಶೇರಾ ೨೩ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಹೆಸರನ್ನು ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ ಚೂಂತಾರು ಶಿಫಾರಸು ಮಾಡಿದ್ದರು.
Next Story





