ವಿಟ್ಲ: ಭಾರೀ ಗಾಳಿ ಮಳೆಗೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ
ಕಟ್ಟಡದಿಂದ ಕುಸಿದುಬಿದ್ದ ಕಲ್ಲುಗಳು

ಬಂಟ್ವಾಳ : ಭಾರೀ ಮಳೆ ಗಾಳಿಗೆ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಕಲ್ಲುಗಳು ಬಿದ್ದು ಹಲವು ವಾಹನಗಳು ಹಾನಿಗೊಂಡ ಘಟನೆ ನಡೆದಿದೆ.
ವಿಟ್ಲದಲ್ಲಿ ಇಂದು ಸಂಜೆ ವೇಳೆ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿತ್ತು. ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪಾರ್ಕಿಂಗ್ ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಪಾರ್ಕಿಂಗ್ ನ ಮೇಲ್ಭಾಗಕ್ಕೆ ಬೀಸಿಲು ಬಾರದಂತೆ ಹಳದಿ ಬಟ್ಟೆಯ ಚಪ್ಪರಕ್ಕೆ ಅಳವಡಿಸಲಾಗಿದ್ದ ಹೋಲೊ ಬ್ಲಾಕ್ ಕಲ್ಲುಗಳ ರಾಶಿ ಗಾಳಿಗೆ ಕುಸಿದಿದೆ. ಇದರಿಂದ ಸುಮಾರು ಐದು ದ್ವಿಚಕ್ರ ವಾಹನಗಳು ಹಾನಿಗೊಂಡಿದೆ. ಸ್ಥಳದಲ್ಲಿ ಜನರು ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Next Story