ಸಚಿವ ಈಶ್ವರಪ್ಪ ರಾಜೀನಾಮೆಗೆ ಎನ್‌ಎಸ್‌ಯುಐ ಪ್ರತಿಭಟನೆ

ಮಂಗಳೂರು, ಎ.೧೩: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮಗೆ ಮತ್ತು ಬಂಧನಕ್ಕೆ ಆಗ್ರಹಿಸಿ ಎನ್‌ಎಸ್‌ಯುಐ ದ.ಕ. ಜಿಲ್ಲಾ ಸಮಿತಿ ಬುಧವಾರ ನಗರದ ಮಲ್ಲಿಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಉಪಾಧ್ಯಕ್ಷರಾದ ಮಾರುತಿ, ಫಾರೂಕ್ ಬಯಾಬೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಭರತ್ ರಾಮ್, ವಿಟಿಯು ಉಸ್ತುವಾರಿ ಅನ್ವಿತ್ ಕಟೀಲ್, ಪವನ್ ಸಾಲ್ಯಾನ್, ಮುಖಂಡರಾದ ಬಾತೀಷ್ ಅಳಕೆಮಜಲು, ಶಫೀಕ್ ಬಂಟ್ವಾಳ, ತಮೀಝ್ ಕೋಲ್ಪೆ, ಶಾನ್ ಸಿರಿ, ಶೋನಿತ್ ಬಂಗೇರ ಶಕೀಲ್, ಅಹ್ನಾಫ್, ಲೆಸ್ಟರ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
Next Story