ಕಾಂ.ಬಸವಪುನ್ನಯ್ಯರ ಸಂಸ್ಮರಣಾ ದಿನಾಚರಣೆ

ಮಂಗಳೂರು : ಸ್ವಾತಂತ್ರ್ಯ ಹೋರಾಟಗಾರರೂ, ತೆಲಂಗಾಣ ರೈತ ಹೋರಾಟದ ರೂವಾರಿಯಾಗಿದ್ದ ಎಂ.ಬಸವಪುನ್ನಯ್ಯರವರು ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ದಾಂತಿಕ ನಿರೂಪಣೆಯ ಮೇರು ವ್ಯಕ್ತಿ ಎಂದು ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಹೇಳಿದರು.
ಕಾಂ.ಬಸವಪುನ್ನಯ್ಯರವರ ೩೦ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಬಂಡವಾಳಶಾಹಿ ಸಿದ್ದಾಂತಕಾರರಿಗೆ ಸಿಂಹಸ್ವಪ್ನರಾಗಿದ್ದ ಅವರು ಸಿಪಿಎಂ ಪಕ್ಷ ರೂಪೀಕರಣದ ೯ ಮಂದಿ ನಾಯಕರಲ್ಲಿ ಒಬ್ಬರಾಗಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ೧೪ ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಪ್ರಖರ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು.
ದಲಿತ ಹಕ್ಕುಗಳ ಸಮಿತಿಯ ನಗರಾಧ್ಯಕ್ಷ ರಾಧಾಕೃಷ್ಣ ಬೊಂಡಂತಿಲ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಯೋಗೀಶ್ ಜಪ್ಪಿನಮೊಗರು ವಂದಿಸಿದರು
Next Story





