ಸಂತೋಷ್ ಪಾಟೀಲ್ ಅವರ ಗುತ್ತಿಗೆ ಹಣ 4 ಕೋಟಿ ರೂ. ಕೂಡಲೇ ಪಾವತಿಸಬೇಕು: ಸಿದ್ದರಾಮಯ್ಯ ಒತ್ತಾಯ
ಸಂತೋಷ್ ಪಾಟೀಲ್ ನಿವಾಸಕ್ಕೆ ಕಾಂಗ್ರೆಸ್ ನಾಯಕರ ಭೇಟಿ

photo- @INCKarnataka
ಬೆಳಗಾವಿ: ಸಂತೋಷ್ ಪಾಟೀಲ್ ಅವರ ಕೆಲಸಕ್ಕೆ ಸಂಬಂಧಿಸಿದ ಗುತ್ತಿಗೆ ಹಣ 4 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
'ಸಂತೋಷ್, ಸಚಿವರು ಹೇಳದೇ ಕೆಲಸ ಮಾಡಿರುವುದಿಲ್ಲ. ಚಿನ್ನ ಗಿರವಿ ಇಟ್ಟು ಸಾಲ ಮಾಡಿ ಕೆಲಸ ಮಾಡಿದ್ದಾರೆ. ಅವರ ಕುಟುಂಬ ಈಗ ಅನಾಥವಾಗಿದ್ದು, ನಮ್ಮ ಪಕ್ಷದಿಂದ ಸಂತೋಷ್ ಪತ್ನಿಗೆ ತಾತ್ಕಾಲಿಕವಾಗಿ ಕೆಲಸ ಹಾಗೂ 11 ಲಕ್ಷ ರೂ.ನೀಡುತ್ತೇವೆ. ಸರಕಾರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಸಂತೋಷ್ ಪತ್ನಿಗೆ ಸರಕಾರಿ ಕೆಲಸ ಕೊಡಬೇಕು' ಎಂದು ಒತ್ತಾಯಿಸಿದರು.
'ಸಚಿವ ಈಶ್ವರಪ್ಪ ಶೇ.40 ಕಮಿಷನ್ ಕೇಳಿದ್ದರಿಂದಲೇ ಸಂತೋಷ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ತಾಯಿ ಹಾಗೂ ಪತ್ನಿಯೂ ಆದೇ ಮಾತು ಹೇಳಿದ್ದಾರೆ. ಸಚಿವರಿಗೆ ಶಿಕ್ಷೆ ಆಗಬೇಕು, ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ’ ಎಂದರು.
ಸಚಿವ ಕೆ.ಎಸ್ ಈಶ್ವರಪ್ಪ ಅವರ ಕಮಿಷನ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಬೆಳಗಾವಿಯ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala, ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಪಕ್ಷ ನಾಯಕರಾದ @siddaramaiah ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. pic.twitter.com/5NDXcaUZY5
— Karnataka Congress (@INCKarnataka) April 13, 2022







