ಇಂಡೋನೇಶ್ಯಾ: ಪ್ರಪಾತಕ್ಕೆ ಉರುಳಿದ ಟ್ರಕ್; 18 ಮಂದಿ ಮೃತ್ಯು
ಜಕಾರ್ತ, ಎ.13: ಇಂಡೋನೇಶ್ಯಾದ ಪಶ್ಚಿಮ ಪಪುವಾ ಪ್ರಾಂತದಲ್ಲಿ ಮಿತಿಮೀರಿ ಸರಕು ಮತ್ತು ಜನರು ತುಂಬಿದ್ದ ಟ್ರಕ್ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿಬಿದ್ದು ಎಳೆಯ ಮಗುವಿನ ಸಹಿತ 18 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಅರ್ಫಾಕ್ ಪರ್ವತ ಪ್ರದೇಶದಿಂದ ಕೆಳಗಿಳಿಯುತ್ತಿದ್ದಾಗ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಟ್ರಕ್ ನಲ್ಲಿ ಮರದ ದಿಮ್ಮಿಯನ್ನು ಸಾಗಿಸಲಾಗುತ್ತಿತ್ತು , ಜತೆಗೆ 29 ಜನರು ಪ್ರಯಾಣಿಸುತ್ತಿದ್ದರು. ಟ್ರಕ್ ಪಲ್ಟಿಯಾದಾಗ ಮಗುವಿನ ಸಹಿತ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು, ಗಂಭೀರ ಗಾಯಗೊಂಡಿದ್ದ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ತಕ್ಷಣಾ ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದ್ದು 11 ಮಂದಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಪ್ರಯಾಣಿಕರಲ್ಲಿ ಹೆಚ್ಚಿನವರು ಗಣಿ ಕಾರ್ಮಿಕರು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಪರಶಿಯನ್ ಮನೋಕ್ವಾರಿ ಹೇಳಿದ್ದಾರೆ.
Next Story





