ಹೊಸ ನರ್ಸಿಂಗ್ ಕೋರ್ಸ್ ಆರಂಭ ಕೋರಿಕೆ ಬಗ್ಗೆ ಪರಿಗಣಿಸಲು ಹೈಕೋರ್ಟ್ ಗಡುವು

ಬೆಂಗಳೂರು, ಎ.13: ಹೊಸದಾಗಿ ಜನರಲ್ ನರ್ಸಿಂಗ್ ಮತ್ತು ಮಿಡ್‍ವೈಫರಿ(ಜಿಎನ್‍ಎಂ) ಡಿಪ್ಲೊಮಾ ಕೋರ್ಸ್ ಆರಂಭಿಸಲು ಅನುಮತಿ ಕೋರಿ 25 ನರ್ಸಿಂಗ್ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲು ಸರಕಾರಕ್ಕೆ 8 ವಾರಗಳ ಗಡುವನ್ನು ಹೈಕೋರ್ಟ್ ವಿಧಿಸಿದೆ.
ಜೆಪಿಐ ದಾಸ್ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಇತರೆ 24 ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್ 2019ರಲ್ಲಿ ಅರ್ಜಿದಾರ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳನ್ನು 8 ವಾರದಲ್ಲಿ ಪರಿಗಣಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿದೆ.
2019-20ನೆ ಸಾಲಿನಲ್ಲಿ ಹೊಸದಾಗಿ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್‍ವೈಫರಿ ಕೋರ್ಸ್ ಆರಂಭಿಸಲು ಅನುಮತಿ ಕೋರಿ ಅರ್ಜಿದಾರ ಶಿಕ್ಷಣ ಸಂಸ್ಥೆಗಳು ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದವು.
Next Story





