Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾನವ ಘನತೆ ಡಾ. ಬಿ.ಆರ್. ಅಂಬೇಡ್ಕರ್

ಮಾನವ ಘನತೆ ಡಾ. ಬಿ.ಆರ್. ಅಂಬೇಡ್ಕರ್

ಡಾ. ಎಂ. ವೆಂಕಟಸ್ವಾಮಿಡಾ. ಎಂ. ವೆಂಕಟಸ್ವಾಮಿ14 April 2022 10:28 AM IST
share
ಮಾನವ ಘನತೆ  ಡಾ. ಬಿ.ಆರ್. ಅಂಬೇಡ್ಕರ್

ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾನವ ಕುಲಕ್ಕೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಒಂದು ಜ್ವಲಂತ ಸಾಕ್ಷಿಯಾಗಿದ್ದಾರೆ. ಡಾ.ಭೀಮಾರಾವ್ ರಾಮ್ಜೀ ಅಂಬೇಡ್ಕರ್ (01.04.1891-06.12.1956) ಅವರನ್ನು ಪ್ರೀತಿಯಿಂದ ಜನರು ಬಾಬಾಸಾಹೇಬ್ ಮತ್ತು ಆಧುನಿಕ ಬುದ್ಧ ಎಂದೇ ಕರೆಯುತ್ತಾರೆ. ಅಂಬೇಡ್ಕರ್ ಅವರು ದಲಿತರು/ಅಸ್ಪಶ್ಯರು, ಮಹಿಳೆಯರು ಮತ್ತು ಕಾರ್ಮಿಕರ ಶ್ರೇಯಸ್ಸಿಗೆ ಇಡೀ ಬದುಕನ್ನು ಮೀಸಲಿಟ್ಟರು. ವಕೀಲರು, ಅರ್ಥಶಾಸ್ತ್ರಜ್ಞರಾದ ಅಂಬೇಡ್ಕರ್, ಮೊದಲ ಕೇಂದ್ರ ಕಾನೂನು ಸಚಿವರು ಮತ್ತು ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ.

 ಅಂಬೇಡ್ಕರ್ ಅವರು ಕಾನೂನು ಪದವಿಯ ಜೊತೆಗೆ ‘ಕೊಲಂಬಿಯಾ’ ಮತ್ತು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ಕಾಲೇಜುಗಳಲ್ಲಿ ಡಾಕ್ಟರೇಟ್‌ಗಳನ್ನು ಗಳಿಸಿದರು. ಕಾನೂನು, ಅರ್ಥಶಾಸ್ತ್ರ ಮತ್ತು ರಾಜಶಾಸ್ತ್ರ ಅಧ್ಯಯನ ಮಾಡಿ ಅದ್ಭುತ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದರು. ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ‘ಭಾರತರತ್ನ’ ಪ್ರಶಸ್ತಿ ನೀಡಲಾಯಿತು. ಬ್ರಿಟಿಷರ ಮಿಲಿಟರಿ ಕಂಟೋನ್ಮೆಂಟ್ ಪಟ್ಟಣ ‘ಮೋಹ್’ನಲ್ಲಿ (ಮಧ್ಯ ಪ್ರದೇಶ) ಸುಬೇದಾರ್ ರ್ಯಾಂಕಿನ ಮಿಲಿಟರಿ ಅಧಿಕಾರಿ ರಾಮ್‌ಜೀ ಮಾಲೋಜಿ ಸಕ್ಪಾಲ್ ಮತ್ತು ಭೀಮಾಬಾಯಿ ಮುರ್ಬಾದ್ಕರ್ ಸಕ್ಪಾಲರಿಗೆ ಅಂಬೇಡ್ಕರ್ ಕೊನೆಯ (14ನೇ) ಮಗನಾಗಿ ಜನಿಸಿದರು. ಮರಾಠಿ ಹಿನ್ನೆಲೆಯ ಮಹಾರ್ ಜಾತಿಗೆ ಸೇರಿದ ಇವರು ಮೂಲವಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಂದನ್‌ಘರ್ ತಾಲೂಕಿನ ಅಂಬೇವಾಡಿ ಹಳ್ಳಿಯವರು. ರಾಮ್‌ಜೀ ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಅಸ್ಪಶ್ಯರು ಎನ್ನುವ ಕಾರಣಕ್ಕೆ ತಾರತಮ್ಯ ತೋರುತ್ತಿದ್ದಾರೆ ಎಂದು ಬ್ರಿಟಿಷರ ಗಮನ ಸೆಳೆಯಲು ಸಫಲರಾಗಿದ್ದರು. ಮೋಹ್ ಮಿಲಿಟರಿ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್‌ರನ್ನು ಕೋಣೆಯ ಹೊರಗೆ ಕೂರಿಸಿ, ಕುಡಿಯಲು ನೀರು ಸಹ ಕೊಡುತ್ತಿರಲಿಲ್ಲ. ಅಂಬೇಡ್ಕರ್ ಮುಂಬೈನ ಎಲ್ಫಿನ್‌ಸ್ಟನ್ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಅವರ ಕುಟುಂಬ ಖಾಸಗಿ ಪಾಠ ಹೇಳಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿಯನ್ನು ಹೊಂದಿರಲಿಲ್ಲ. ರಾಮ್‌ಜೀ ಕುಟುಂಬ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದು, ಅಂಬೇಡ್ಕರ್ ರಾತ್ರಿ ಓದುಕೊಳ್ಳುತ್ತಿದ್ದಾಗ ಅವರ ಕಾಲ ಬಳಿ ಮೇಕೆಯೊಂದು ಕಾಲುಚಾಚಿ ಮಲಗಿದ್ದರೆ ರಾಮ್ಜೀ ನಿದ್ದೆ ಮಾಡದೇ ಕುಳಿತಿರುತ್ತಿದ್ದರು. ಸೀಮೆಣ್ಣೆ ದೀಪಕ್ಕೆ ಗ್ಲಾಸ್ ಇಲ್ಲದೆ ಬಾಗಿಲು ಮುಚ್ಚಿರುತ್ತಿದ್ದ ಕಾರಣ ಆ ದೀಪ ಭಾರೀ ಹೊಗೆ ಉಗುಳುತ್ತಿತ್ತು. ಕೆಲವೊಮ್ಮೆ ಎಣ್ಣೆ ಮುಗಿದುಹೋಗಿ ಭೀಮ ಕತ್ತಲಲ್ಲೇ ಕುಳಿತು ತೂಕಡಿಸುತ್ತಿದ್ದ. ಭೀಮ ಓದುತ್ತಿದ್ದ ಶಾಲೆ ಇಂಗ್ಲಿಷ್ ಶಾಲೆಯಾದರೂ ಜಾತಿಯ ಪಿಡುಗು ಅವನನ್ನು ಬೆನ್ನು ಬಿಟ್ಟಿರಲಿಲ್ಲ.

ಅಂಬೇಡ್ಕರ್ ಪದವಿ ಮುಗಿಸಿದ ಬಳಿಕ ಬರೋಡಾ ಮಹಾರಾಜರ ಬಳಿ ಅವರಿಗೆ ಕೊಟ್ಟಿದ್ದ ಮಾತಿನಂತೆ ಕೆಲಸಕ್ಕೆ ಸೇರಿಕೊಂಡರು. ಮಗ ಇನ್ನೂ ಓದಲಿ ಎನ್ನುವುದು ತಂದೆಯ ಆಸೆಯಾಗಿದ್ದರೂ ಓದಲು ಸಹಾಯ ಮಾಡಿದ್ದ ಮಹಾರಾಜರ ಆದೇಶವನ್ನು ಮೀರುವಂತಿರಲಿಲ್ಲ. ಅಂಬೇಡ್ಕರ್ ಕರ್ತವ್ಯಕ್ಕೆ ಹಾಜರಾಗಿ 15 ದಿನಗಳು ಕಳೆದಿರಲಿಲ್ಲ. ತಂದೆಯ ತೀವ್ರ ಅನಾರೋಗ್ಯದ ಸುದ್ದಿ ತಲುಪಿ ಮುಂಬೈಗೆ ಹಿಂದಿರುಗಿ ಬಂದಾಗ ತಂದೆಯ ಆರೋಗ್ಯ ಸಂಪೂರ್ಣವಾಗಿ ಉಲ್ಭಣಿಸಿ ಕೊನೆ ಉಸಿರೆಳೆಯಲು ಅಂಬೇಡ್ಕರ್‌ಗಾಗಿ ಕಾಯುತ್ತಿದ್ದರು. ಅಂಬೇಡ್ಕರ್‌ರನ್ನು ನೋಡಿದ ರಾಮ್‌ಜೀ ಮಗನನ್ನು ನೋಡಿ ಒಮ್ಮೆ ಬೆನ್ನು ಸವರಿದರು. ಮುಂದಿನ ಕೆಲವೇ ಕ್ಷಣಗಳಲ್ಲಿ ಅವರನ್ನು ಸಾವು ಸೆಳೆದುಕೊಂಡುಬಿಟ್ಟಿತು. ಅಂಬೇಡ್ಕರ್ ಭೋರಾಡಿ ಅತ್ತರು. ಫೆಬ್ರವರಿ 2, 1913 ಅಂಬೇಡ್ಕರ್ ಬಾಳಿನಲ್ಲಿ ಕರಾಳ ದಿನವಾಗಿತ್ತು. ಅಂಬೇಡ್ಕರ್ ಅವರ ಸಾಮಾಜಿಕ-ರಾಜಕೀಯ ಪ್ರಜ್ಞೆ ಆಧುನಿಕ ಭಾರತದ ಮೇಲೆ ಗಾಢವಾದ ಪರಿಣಾಮ ಬೀರಿದ್ದಲ್ಲದೆ, ಸ್ವತಂತ್ರ ಭಾರತದ ಸಾಮಾಜಿಕ ಮತ್ತು ರಾಜಕೀಯ ಚಿಂತನೆ, ಅಂಬೇಡ್ಕರ್ ಅವರಿಂದ ಪ್ರಪಂಚದಾದ್ಯಂತ ಗೌರವ ಪಡೆಯಿತು ಎನ್ನುವುದು ಅನೇಕ ವಿದ್ವಾಂಸರ ಅನಿಸಿಕೆ. ಅವರ ಪ್ರಭಾವ ಆಧುನಿಕ ಭಾರತದ ವಿವಿಧ ವಲಯಗಳ ಮೇಲೆ ಪರಿಣಾಮ ಬೀರಿದ್ದು, ಭಾರತದ ಇಂದಿನ ಸಾಮಾಜಿಕ-ಆರ್ಥಿಕ, ಕಾನೂನು ಮತ್ತು ವಿದ್ಯಾಭ್ಯಾಸದ ಒಟ್ಟು ಬೆಳವಣಿಗೆಗೆ ಕಾರಣವಾಗಿದೆ. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಅವರ ಮಧ್ಯೆ ಪೂನಾ ಒಪ್ಪಂದದ ಕಾಲದಲ್ಲಿ ನಡೆದ ಸಾಮಾಜಿಕ ಘರ್ಷಣೆಯಿಂದ ಅಂಬೇಡ್ಕರ್ ಅವರು ಒಂದು ವೇಳೆ ಸಂಯಮ ಕಳೆದುಕೊಂಡಿದ್ದರೆ ಬಹುಶಃ ದಲಿತರಿಗಷ್ಟೇ ಅಲ್ಲದೆ, ಈ ದೇಶದ ಭವಿಷ್ಯಕ್ಕೂ ಒಳ್ಳೆಯದಾಗುತ್ತಿರಲಿಲ್ಲ. ಬಹುಶಃ ದೇಶ ಇದುವರೆಗೂ ಇಷ್ಟು ಒಗ್ಗಟ್ಟಾಗಿ, ದೃಢವಾಗಿ ಇರುತ್ತಿರಲಿಲ್ಲವೇನೋ? ಎನ್ನುವ ಮಾತಿದೆ. ಅವರು ಮುಂದೆ ನಿಂತು ರಚಿಸಿದ ಭಾರತ ಸಂವಿಧಾನ ಪ್ರಪಂಚದ ಅನೇಕ ದೇಶಗಳಿಗೆ ಮಾದರಿಯಾಗಿದ್ದಲ್ಲದೆ ಅನೇಕ ದೇಶಗಳು ಅದರಲ್ಲಿನ ಸಾಮಾಜಿಕ ಪ್ರಜ್ಞೆ ಮತ್ತು ಹಕ್ಕುಗಳನ್ನು ಅಳವಡಿಸಿಕೊಂಡಿವೆ. ಅಂಬೇಡ್ಕರ್ ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಂಬಿಕೆ ಇಟ್ಟಿದ್ದರ ಜೊತೆಗೆ ಜಾತಿ-ಅಸ್ಪಶ್ಯತೆಯ ತಾರತಮ್ಯ ಸಮಾಜವನ್ನು ಗಟ್ಟಿಯಾಗಿಯೇ ಟೀಕಿಸುತ್ತಿದ್ದರು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಅಡಿಪಾಯವನ್ನು ಅಲುಗಾಡಿಸಿದ ಅವರ ಮೇಲೆ ಹಿಂದೂ ಸಮುದಾಯಗಳಲ್ಲಿ ಅಸೂಯೆ, ಪ್ರೀತಿ ಮತ್ತು ಆರೋಪಗಳು ಇಂದಿಗೂ ಇವೆ.

ಅವರು ತಮ್ಮ ಇಳಿ ವಯಸ್ಸಿನಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಭಾರತದ ಮೂಲ ಜನರಾದ ನಾಗಾಗಳು ಒಂದು ಕಾಲದಲ್ಲಿ ಬೌದ್ಧ ಧರ್ಮವನ್ನು ಮಧ್ಯ ಭಾರತದಿಂದ ಪ್ರಚಾರ ಮಾಡಿದ್ದರು ಎನ್ನುವ ಕಾರಣದಿಂದ ಅಂಬೇಡ್ಕರ್ ಅವರು ದೇಶದ ಮಧ್ಯ ಭಾಗ ನಾಗಪುರವನ್ನು ದೀಕ್ಷಾಭೂಮಿಯಾಗಿ ಆಯ್ಕೆ ಮಾಡಿಕೊಂಡರು. ಅಂಬೇಡ್ಕರ್ ಅವರ ರಾಜಕೀಯ, ತತ್ವಜ್ಞಾನ, ಆರ್ಥಿಕ ಜ್ಞಾನ ಮತ್ತು ಸಾಮಾಜಿಕ ಸಂಘಟನೆಯ ಬಿಳಲುಗಳು ಭಾರತವಲ್ಲದೆ ವಿದೇಶಗಳಲ್ಲೂ ಹರಡಿಕೊಂಡಿವೆ. ಹಿಸ್ಟರಿ-ಟಿವಿ.18 ಮತ್ತು ಸಿಎನ್‌ಎನ್/ಐಬಿಎನ್ ಆಯೋಜಿಸಿದ್ದ 2012ನೇ ವರ್ಷದ ಸಮೀಕ್ಷೆಯಲ್ಲಿ ಅಂಬೇಡ್ಕರ್ ದೇಶದ ಮಹಾನ್ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು. ಅವರಿಗೆ 20 ದಶಲಕ್ಷ ಮತಗಳು ಬಿದ್ದಿದ್ದವು. ಇತಿಹಾಸಕಾರ ನರೇಂದ್ರ ಜಾಧವ್, ‘‘ಅಂಬೇಡ್ಕರ್ ಎಲ್ಲಾ ಕಾಲಕ್ಕೂ ಅತ್ಯಧಿಕ ಶಿಕ್ಷಣ ಹೊಂದಿದ ಭಾರತದ ಬಹುದೊಡ್ಡ ಅರ್ಥಶಾಸ್ತ್ರಜ್ಞರು’’ ಎಂದರೆ, ಅಮರ್ತ್ಯಸೇನ್, ‘‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಪಿತಾಮಹ. ಅರ್ಥಶಾಸ್ತ್ರಕ್ಕೆ ಅವರ ಕೊಡುಗೆ ಅದ್ಭುತ ಮತ್ತು ಶಾಶ್ವತವಾದದ್ದು’’ ಎಂದಿದ್ದಾರೆ. ವಿವಾದಾತ್ಮಕ ಮತ್ತು ಆಧ್ಯಾತ್ಮಿಕ ಗುರು ಓಶೋ, ‘‘ಹಿಂದೂ ಕಾನೂನುಗಳ ಪ್ರಕಾರ ಅತ್ಯಂತ ಕೆಳ ಜಾತಿಗಳಲ್ಲಿ ಹುಟ್ಟುವವರು ಶೂದ್ರರು ಮತ್ತು ಅಸ್ಪಶ್ಯರು, ಅಂದರೆ ಬುದ್ಧಿಯಿಲ್ಲದ ಹೆಡ್ಡರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗ ಸಂವಿಧಾನ ರಚಿಸಿದವರು ಡಾ.ಬಾಬಾಸಾಹೇಬ್ ಅಂಬೇಡ್ಕರ್, ಒಬ್ಬ ಶೂದ್ರ. ಆಧುನಿಕ ಭಾರತದಲ್ಲಿ ಅವರಿಗೆ ಸರಿಸಮಾನರಾದ ಬುದ್ಧಿವಂತರು ಯಾರೂ ಇಲ್ಲದಾಯಿತು-ಇದು ಹೇಗೆ ಸಂಭವಿಸಿತು. ಅಂದರೆ ಹಿಂದೂ ಕಾನೂನು ತಪ್ಪಾಗಿದೆಯೇ?’’ ಎಂದು ಪ್ರಶ್ನಿಸಿದ್ದರು. ಇನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 2010ರಲ್ಲಿ ಭಾರತದ ಸಂಸತ್ತಿನಲ್ಲಿ ಮಾತನಾಡುತ್ತ, ‘‘ದಲಿತ ನಾಯಕ ಡಾ.ಅಂಬೇಡ್ಕರ್ ಸಂವಿಧಾನ ಶಿಲ್ಪಿ, ಮಾನವ ಹಕ್ಕುಗಳ ಮಹಾನ್ ಚಾಂಪಿಯನ್’’ ಎಂದರು. ನೆಲ್ಸನ್ ಮಂಡೇಲಾ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ‘‘ನಾನು ಭಾರತದಿಂದ ನನ್ನೊಂದಿಗೆ ಏನಾದರೂ ತೆಗೆದುಕೊಂಡು ಹೋಗುತ್ತೇನೆಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ ಮಾತ್ರ’’ ಎಂದಿದ್ದರು. ಇದು ಅಂಬೇಡ್ಕರ್ ಅವರ ಮಾನವ ಘನತೆಯನ್ನು ಎತ್ತಿ ತೋರಿಸುತ್ತದೆ.

ದೇಶದ ತುಂಬಾ ರಾಜಕೀಯ ವಿರೋಧಿಗಳನ್ನು, ಧರ್ಮಾಂಧರನ್ನು ಎದುರು ಹಾಕಿಕೊಂಡು ತಾನು, ತನ್ನ ಕುಟುಂಬದ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಒಂದು ದೊಡ್ಡ ದೇಶದ ಬೆಳವಣಿಗೆಗೆ ಆಧುನಿಕ ಬುನಾದಿ ಹಾಕಿ ಮೇಲು-ಕೀಳು, ತಾರತಮ್ಯ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ದೇಶವನ್ನು ಒಗ್ಗಟ್ಟಾಗಿರಿಸಿದ ವ್ಯಕ್ತಿ ಎಂದರೆ ಜಗತ್ತಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ. ಆದರೆ ಅಂಬೇಡ್ಕರ್ ಅವರ ಹೋರಾಟದ ಫಲದಿಂದ ಬದುಕನ್ನು ಹಸನಾಗಿಸಿಕೊಂಡಿರುವ ಲಕ್ಷಾಂತರ ವಿದ್ಯಾವಂತ ದಲಿತರು, ದಲಿತ ಅಧಿಕಾರಿಗಳು, ಸ್ವಾರ್ಥ ದಲಿತ ರಾಜಕಾರಣಿಗಳು ಗೆದ್ದಕುದುರೆಯ ಬಾಲ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಜೊತೆಗೆ ಕೈಜೋಡಿಸಿ ಇಂದಿಗೂ ಮುಖ್ಯವಾಹಿನಿ ಯಿಂದ ದೂರ ಉಳಿದುಕೊಂಡಿರುವ ದಲಿತರಿಗೆ ದ್ರೋಹ ಬಗೆಯುತ್ತಿರುವುದು ದೊಡ್ಡ ವಿಪರ್ಯಾಸವೇ ಸರಿ.

share
ಡಾ. ಎಂ. ವೆಂಕಟಸ್ವಾಮಿ
ಡಾ. ಎಂ. ವೆಂಕಟಸ್ವಾಮಿ
Next Story
X