ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕೊಲಂಬಿಯಾ ಫುಟ್ಬಾಲ್ ತಂಡದ ಮಾಜಿ ನಾಯಕ ಫ್ರೆಡ್ಡಿ ರಿಂಕನ್ ಮೃತ್ಯು

ಫ್ರೆಡ್ಡಿ ರಿಂಕನ್ (Photo: Twitter/@StanCollymore)
ಲಂಡನ್: ಕೊಲಂಬಿಯಾ ಫುಟ್ಬಾಲ್ ತಂಡದ ಮಾಜಿ ನಾಯಕ ಫ್ರೆಡ್ಡಿ ರಿಂಕನ್ ಕಾರು ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು AFP ವರದಿ ಮಾಡಿದೆ.
55 ವರ್ಷದ ಫ್ರೆಡ್ಡಿ ಅವರು ಚಲಾಯಿಸುತ್ತಿದ್ದ ಕಾರು ಕೊಲಂಬಿಯಾದ ಕ್ಯಾಲಿಯಲ್ಲಿ ಸೋಮವಾರ ಮುಂಜಾನೆ ಬಸ್ಗೆ ಡಿಕ್ಕಿ ಹೊಡೆದಿತ್ತು.
ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಮಾಜಿ ಮಿಡ್ಫೀಲ್ಡರ್ ರಿಂಕನ್ ಕೊಲಂಬಿಯಾದ ಪರವಾಗಿ 17 ಗೋಲುಗಳನ್ನು ಗಳಿಸಿದ್ದರು. 1990, 1994 ಹಾಗೂ 1998ರಲ್ಲಿ ನಡೆದಿದ್ದ ವಿಶ್ವಕಪ್ಗಳಲ್ಲಿ ಆಡಿದ್ದರು.
10 ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ಬಳಿಕ ತಮ್ಮ ದೇಶಕ್ಕಾಗಿ ಅತಿ ಹೆಚ್ಚು ವಿಶ್ವಕಪ್ ಪಂದ್ಯಗಳಲ್ಲಿ ಕಾಣಿಸಿಕೊಂಡ ದಾಖಲೆಯನ್ನು ಕಾರ್ಲೋಸ್ ವಾಲ್ಡೆರ್ರಾಮ ಅವರೊಂದಿಗೆ ಹಂಚಿಕೊಂಡಿದ್ದರು.
ರಿಂಕನ್ ಅವರು 1990 ರಲ್ಲಿ28 ವರ್ಷಗಳ ಬಳಿಕ ವಿಶ್ವಕಪ್ ಗೆ ಅರ್ಹತೆ ಪಡೆದ ಕೊಲಂಬಿಯಾ ತಂಡದ ಭಾಗವಾಗಿದ್ದರು. ಅಂತಿಮವಾಗಿ ವಿಜೇತವಾದ ಪಶ್ಚಿಮ ಜರ್ಮನಿ ವಿರುದ್ಧ 1-1 ಡ್ರಾದಲ್ಲಿ ಸ್ಮರಣೀಯ ಗೋಲು ಗಳಿಸಿದ್ದರು.
Next Story