ಹಣ ದುರುಪಯೋಗ ಆರೋಪ: ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.14: ಮುಜರಾಯಿ ಇಲಾಖೆಯ 25.50 ಲಕ್ಷ ರೂಪಾಯಿ ದುರುಪಯೋಗ ಆರೋಪದ ಮೇರೆಗೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟರಮಣಪ್ಪ ಎಂಬಾತನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆಯುಕ್ತರು ಅನುಮತಿ ಇಲ್ಲದೆಯೇ ಇಲಾಖೆಯ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಇಲಾಖೆಯ ಮತ್ತೋರ್ವ ಅಧಿಕಾರಿ ಅರವಿಂದ ಬಾಬು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಸೆಕ್ಷನ್ 403, 409 ಅಡಿ ಪ್ರಕರಣ ದಾಖಲಾಗಿತ್ತು.
Next Story





