ಅಂಬಲಪಾಡಿ: ಎ.16ರಿಂದ ಶೈಕ್ಷಣಿಕ ಸನಿವಾಸ ಶಿಬಿರ
ಉಡುಪಿ : ಉಡುಪಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ವಿದ್ಯಾಪೋಷಕ್ ಇದರ ಪ್ರಥಮ ಪಿಯುಸಿ ಪೂರೈಸಿದ ೨೫೦ ವಿದ್ಯಾರ್ಥಿಗಳಿಗೆ ಎ.೧೬ರಿಂದ ಅಂಬಲಪಾಡಿ ದೇವಳದ ವಠಾರದಲ್ಲಿ ‘ಅಂಬಲಪಾಡಿ ಶೈಕಣಿಕ ಸನಿವಾಸ ಶಿಬಿರ’ ನಡೆಯಲಿದೆ.
ಎ.೧೬ರಂದು ಅತಿಥಿ ಗಣ್ಯರ ಸಮ್ಮುಖದಲ್ಲಿ ದೇವಳದ ಧರ್ಮದರ್ಶಿಗಳಾದ ಡಾ.ನಿ.ಬೀ. ವಿಜಯ ಬಲ್ಲಾಳರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಎ.೨೦ರಂದು ಶಿಬಿರ ಮುಕ್ತಾಯಗೊಳ್ಳಲಿದೆ. ಹುಬ್ಬಳ್ಳಿಯ ಮೈಲೈಫ್‌ನ ಪ್ರವೀಣ್ ವಿ. ಗುಡಿ ಶಿಬಿರದ ನಿರ್ದೇಶಕರಾಗಿರುವರು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





