ಯುವತಿ ಕಾಣೆ
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ಕಾಳಿಕಾಂಭ ದೇವಸ್ಥಾನದ ಸಮೀಪ ವಾಸವಾಗಿದ್ದ ಪುಂಡಲಿಕ ಮಾನಪ್ಪರಾಥೋಡ್ ಎಂಬುವರ ಪುತ್ರಿ ಜ್ಯೋತಿ (21) ಎಂಬಾಕೆ ಎ.13ರ ಬೆಳಗ್ಗೆ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುಂಡಲಿಕ ಮಾನಪ್ಪ ರಾಥೋಡ್ ಕಳೆದ ೩ ತಿಂಗಳಿನಿಂದ ಹೆಂಡತಿ ರುಕುಮವ್ವ, ಮಕ್ಕಳಾದ ಜ್ಯೋತಿ, ದರ್ಶನ್ ಮತ್ತು ಅನಿಲ್ ಜೊತೆ ದೇವಸ್ಥಾನದ ಸಮೀಪದ ದಿನೇಶ್ ಪೈ/ಕಿರಣ್‌ರ ಸೈಟ್‌ನಲ್ಲಿ ವಾಸ ಮಾಡಿಕೊಂಡಿದ್ದರು.
ಎ.೧೩ರಂದು ಪುಂಡಲಿಕ ಎಂದಿನಂತೆ ಬೆಳಗ್ಗೆ ೮ಕ್ಕೆ ಅದೇ ಸೈಟಿನಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಜ್ಯೋತಿ ಕಾಣೆಯಾಗಿದ್ದಾಳೆ. ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿರುವ ಜ್ಯೋತಿ ೫ ಅಡಿ ಎತ್ತರವಿದೆ. ಮಾತನಾಡುವಾಗ ಬಿಕ್ಕಳಿಸುವ ಈಕೆ ಕನ್ನಡ, ಲಂಬಾಣಿ, ಅಲ್ಪಸ್ವಲ್ಪಹಿಂದಿ ಮಾತಾಡುತ್ತಾಳೆ. ಎರಡು ಕಿವಿಗಳಲ್ಲಿ ಚಿನ್ನದ ರಿಂಗ್ ಮತ್ತು ಅದಕ್ಕೆ ಗುಂಡು ಇರುತ್ತದೆ. ಮೂಗಿನಲ್ಲಿ ಚಿನ್ನದ ಮೂಗುತಿ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





