ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ಕುಂದಾಪುರ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕುಂದಾ ಪುರ ಪದವಿಪೂರ್ವ ಕಾಲೇಜಿನ ಲಕ್ಷ್ಮೀ ವೆಂಕಟರಮಣ ಕಲಾಮಂದಿರ ಕವಿ ಮುದ್ದಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ತುರಾಯಿ’ ಇದರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮ್ಮೇಳನಾಧ್ಯಕ್ಷ ಪ್ರೊ.ಎ.ವಿ.ನಾವಡ ಮತ್ತು ಗಾಯತ್ರಿ ವಿ.ನಾವಡ ದಂಪತಿ ದೀಪ ಬೆಳಗಿಸುವ ಮೂಲಕ ಗುರುವಾರ ಚಾಲನೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಕೋಶಾಧಿಕಾರಿ ಮನೋಹರ ಪಿ., ಶಿಕ್ಷಕರಾದ ಮಂಜು ನಾಥ, ಸತ್ಯನಾ ಕೊಡೇರಿ, ಅನಂತಕೃಷ್ಣ ಕೊಡ್ಗಿ, ಕಸಪಾ ತಾಲೂಕು ಅಧ್ಯಕ್ಷ ಪುಂಡಲೀಕ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ರಾಮಕೃಷ್ಣ ಹೆಗಡೆ ಹಿಲ್ಲೂರು, ಸುನೀಲ್ ಭಂಡಾರಿ ಕಡತೋಕ, ಶ್ರೀಕಾಂತ ಶೆಟ್ಟಿ ಯಡಮೊಗೆ ಮುಮ್ಮಳದಲ್ಲಿ ಅರ್ಥದಾರಗಳಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಪ್ರೊ.ಪವನ್ ಕಿರಣ್ಕೆರೆ, ಸತೀಶ್ ಶೆಟ್ಟಿ ಮೂಡಬಗೆ, ಪ್ರಸಾದ ಭಟ್ಕಳ ಅರ್ಥಗಾರಿಕೆಯಲ್ಲಿ ಡಾ.ಜಗದೀಶ ಶೆಟ್ಟಿ ಸಿದ್ದಾಪುರ ಪರಿಕಲ್ಪನೆಯಲ್ಲಿ ಮಾತೃ ಸಾರಥ್ಯ ಯಕ್ಷಗಾನ ತಾಳಮದ್ದಲೆ ನಡೆಯಿತು.
ಮಣೂರು ಸ್ನೇಹಕೂತ ತಂಡದಿಂದ ಸಾಂಸ್ಕೃತಿಕ ವೈವಿಧ್ಯ, ಹಳ್ಳಿಹೊಳೆ ವಾಟೆಬಚ್ಲು ಸಿದ್ದೇಶ್ವರ ಮರಾಠಿ ಹೋಳಿ ತಂಡದಿಂದ ಹೋಳಿ ಕುಣಿತ, ಉಡುಪಿ ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಅವರಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಭಾವನಮನ, ವಿದುಷಿ ಪ್ರವೀತಾ ಅಶೋಕ್ ನಿರ್ದೇಶನದಲ್ಲಿ ಕುಂದಾಪುರ ವಸಂತ ನಾಟ್ಯಾಲಯ ಕಲಾವಿದರಿಂದ ನೃತ್ಯ ಸಿಂಚನ ನಡೆಯಿತು.
ಕಸಾಪ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ನರೇಂದ್ರ ಕುಮಾರ್ ಕೋಟ ಮತ್ತು ಜಗದೀಶ ಶೆಟ್ಟಿ, ಭುವನೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಮನೋಹರ ಪಿ.ವಂದಿಸಿದರು.







